Syndicate Bank
banner
 

ಇತರ ಉತ್ಪನ್ನಗಳು ಹಾಗೂ ಸೇವೆಗಳು

 

ಇತರ ಉತ್ಪನ್ನಗಳು:

ಸಿಂಡಿಕೇಟ್ ಬ್ಯಾಂಕ್ ಗ್ಲೋಬಲ್ ಡೆಬಿಟ್ / ಎಟಿಎಂ ಕಾರ್ಡ್ ಹಾಗೂ ಗ್ಲೋಬಲ್ ಕ್ರೆಡಿಟ್ ಕಾರ್ಡ್:

ನಮ್ಮ ಬ್ಯಾಂಕು "ರೂಪೇ", "ವೀಸಾ" ಮತ್ತು "ಮಾಸ್ಟ್ರೋ" ಬ್ರ್ಯಾಂಡ್ ಹೆಸರುಗಳ ಅಡಿಯಲ್ಲಿ ನಮ್ಮ ಎಲ್ಲಾ ಶಾಖೆಗಳ ಖಾತೆದಾರರಿಗೆ ಗ್ಲೋಬಲ್ ಡೆಬಿಟ್ ಕಮ್ ಎಟಿಎಂ ಕಾರ್ಡನ್ನು ಒದಗಿಸುತ್ತಿದೆ. ಕನಿಷ್ಠ ಪಾವತಿಸಬಹುದಾದ ಮೊತ್ತ ಮತ್ತು ಕಡಿಮೆ ಬಡ್ಡಿದರಗಳಂತಹ ವೈಶಿಷ್ಟ್ಯಗಳ ಖಾತೆದಾರರಿಗೆ ಸಹ ಬ್ಯಾಂಕು ಗ್ಲೋಬಲ್ ಕ್ರೆಡಿಟ್ ಕಾರ್ಡುಗಳನ್ನು ನೀಡುತ್ತದೆ. ಎನ್‌ಪಿಸಿಐ ನ ಎನ್ಎಫ್ಎಸ್ ನೆಟ್‍ವರ್ಕ್ ಗೆ ಬ್ಯಾಂಕ್ ಸೇರಿಕೊಂಡಿದೆ. ಭಾರತದಲ್ಲಿನ ಆಯಾ ಬ್ರಾಂಡಿನ ಕಾರ್ಡುಗಳನ್ನು ಸ್ವೀಕರಿಸುವ ಯಾವುದೇ ವ್ಯಾಪಾರಿ ಸಂಸ್ಥೆಗಳಲ್ಲಿ ಖರೀದಿಗಾಗಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಬಳಸಬಹುದು. ಭಾರತದಾದ್ಯಂತ ಯಾವುದೇ ಎಟಿಎಂ ನಿಂದ ಹಣವನ್ನು ಹಿಂತೆಗೆದುಕೊಳ್ಳಲು ಸಹ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಬಳಸಬಹುದು. "ಡಿಸ್ಕವರ್' ಬ್ರ್ಯಾಂಡಿನ ಕಾರ್ಡುಗಳನ್ನು ಸ್ವೀಕರಿಸುವ ಎಟಿಎಂಗಳು ಮತ್ತು ವ್ಯಾಪಾರಿ ಸಂಸ್ಥೆಗಳು "ರುಪೇ" ಕಾರ್ಡುಗಳನ್ನು ಸ್ವೀಕರಿಸುತ್ತವೆ, ಪ್ರಪಂಚದ ಎಲ್ಲೆಡೆ ವೀಸಾ / ಮಾಸ್ಟರ್ ಕಾರ್ಡುಗಳನ್ನು ಸ್ವೀಕರಿಸುವ ಎಲ್ಲಾ ಎಟಿಎಂಗಳು ಮತ್ತು ವ್ಯಾಪಾರಿ ಸಂಸ್ಥೆಗಳು "ವೀಸಾ" ಮತ್ತು "ಮಾಸ್ಟ್ರೋ" ಕಾರ್ಡುಗಳನ್ನು ಸ್ವೀಕರಿಸುತ್ತವೆ.
 

ಇತರ ಉತ್ಪನ್ನಗಳು::

ಮಾರಾಟದ ಸ್ಥಳಗಳು (ಪಿಒಎಸ್):

ಸ್ಥಾಪನೆಗಳು / ಅಂಗಡಿಗಳು / ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಗ್ರಾಹಕರಿಗೆ ಅಧಿಕಾರ ನೀಡುವ ಮೂಲಕ ತನ್ನ ವ್ಯವಹಾರವನ್ನು ವಿಸ್ತರಿಸಲು (ಎಲೆಕ್ಟ್ರಾನಿಕ್ ಡಾಟಾ ಸೆರೆಹಿಡಿಯುವಿಕೆಯ ಮೂಲಕ ವ್ಯಾಪಾರಿ ಸಂಸ್ಥೆಗಳನ್ನು ಮಾರಾಟದ ಸ್ಥಳಗಳನ್ನಾಗಿ ಗುರುತಿಸಿ) ಪ್ರಾರಂಭಿಸಿದೆ, ಇದರಿಂದ ಎಲ್ಲಾ ರೀತಿಯ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತದೆ
 

ಹಣಕಾಸು ರವಾನೆ / ವರ್ಗಾವಣೆ :

ಹಣಕಾಸು ರವಾನೆ / ವರ್ಗಾವಣೆಯನ್ನು ಈ ಮೂಲಕ ಮಾಡಬಹುದು :
  • bullet ಡಿಮ್ಯಾಂಡ್ ಡ್ರಾಫ್ಟ್ ಖರೀದಿ
  • bullet ಬ್ಯಾಂಕಿನ ಒಂದು ಶಾಖೆಯ ಖಾತೆಯಿಂದ ಇನ್ನೊಂದು ಶಾಖೆಯ ಖಾತೆಗೆ ಆನ್‍ಲೈನ್ ಹಣ ವರ್ಗಾವಣೆ ಮಾಡುವುದು
  • bullet ಎನ್‌ಇ‌ಎಫ್‌ಟಿ, ಆರ್‌ಟಿಜಿಎಸ್ ಮೂಲಕ ಇತರ ಬ್ಯಾಂಕುಗಳ ಖಾತೆಗಳಿಗೆ ಹಾಗೂ ಎನ್ಇಸಿಎಸ್ ಮೂಲಕ ಗೊತ್ತುಪಡಿಸಿದ ಕೇಂದ್ರಗಳಲ್ಲಿ ರವಾನೆ ಮಾಡುವ ವ್ಯವಸ್ಥೆಯನ್ನು ಬ್ಯಾಂಕ್ ಜಾರಿಗೆ ತಂದಿದೆ.
  • bulletಹಣ ವರ್ಗಾವಣೆ ಸೌಲಭ್ಯಗಳನ್ನು ಒದಗಿಸಲು ಬ್ಯಾಂಕು ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‌ಫರ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಚೆಕ್ ಹಾಗೂ ಬಿಲ್ ಗಳ ಸಂಗ್ರಹಣೆ:

ನಮ್ಮ ಶಾಖೆಗಳು ಅಥವಾ ಇತರ ಬ್ಯಾಂಕುಗಳ ಶಾಖೆಗಳಲ್ಲಿ ತೆಗೆಯಲಾದ ಸ್ಥಳೀಯ ಅಥವಾ ಹೊರಪ್ರದೇಶಗಳ ಚೆಕ್ಕು / ಬಿಲ್ಲುಗಳನ್ನು ಸಾರ್ವಜನಿರು ನಮ್ಮ ಬ್ಯಾಂಕಿನ ಎಲ್ಲಾ ಶಾಖೆಗಳ ಮೂಲಕ ಹಣ ಸಂಗ್ರಹಣೆಗೆ ನೀಡಬಹುದು, ಅವುಗಳಿಗೆ ತಕ್ಕಂತಹ ಶುಲ್ಕ ಅನ್ವಯವಾಗುವುದು. ಆಯ್ದ ಶಾಖೆಗಳಲ್ಲಿ ಕಾರ್ಪೋರೇಟ್ ಗಳ ಸಂಗ್ರಹವನ್ನು ಸಕ್ರಿಯವಾಗಿ ತ್ವರಿತಗೊಳಿಸಲು ಬ್ಯಾಂಕ್ ನಗದು ನಿರ್ವಹಣಾ ಸೇವೆಗಳನ್ನು (ಸಿಎಂಎಸ್) ಒದಗಿಸುತ್ತಿದೆ. ಗ್ರಾಹಕರ ಕೋರಿಕೆಯ ಮೇರೆಗೆ ಅವರ ಖಾತೆಗಳ ನಿರ್ವಹಣೆಯ ಆಧಾರದ ಮೇಲೆ ಚೆಕ್ಕು / ಬಿಲ್ಲುಗಳನ್ನು ರಿಯಾಯಿತಿ ಮಾಡಲು ಪರಿಗಣಿಸಲಾಗುವುದು
 

ಸುರಕ್ಷಿತ ಠೇವಣಿ ಲಾಕರುಗಳು:

ಮೌಲ್ಯಯುತ / ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿರಿಸಲು ಸಾರ್ವಜನಿಕರಿಗೆ ಸುರಕ್ಷಿತ ಠೇವಣಿ ಲಾಕರುಗಳ ಸೌಲಭ್ಯವಿದೆ ಹಾಗೂ ಈ ಲಾಕರುಗಳ ಬಾಡಿಗೆ, ಅವುಗಳ ಗಾತ್ರವನ್ನು ಅವಲಂಬಿಸಿರುತ್ತದೆ..
 

ಸುರಕ್ಷಿತ ಪಾಲನೆ ಸೇವೆ :

ಠೇವಣಿ ರಸೀತಿಗಳು, ಷೇರು ಪ್ರಮಾಣಪತ್ರಗಳು, ಭದ್ರತೆಗಳು, ವಿಲ್ ಮತ್ತು ಮೊಹರು ಕವರ್ ಮುಂತಾದ ಪ್ರಮುಖ ದಾಖಲೆಗಳನ್ನು ಸುರಕ್ಷಿತವಾಗಿರಿಸಲು ಬ್ಯಾಂಕ್ ಅನುಮತಿಸುತ್ತದೆ. ಶಾಖೆಗಳಲ್ಲಿ ಪ್ರಚಲಿತ ಮಾರ್ಗದರ್ಶಿ ನಿಯಮಗಳು ಹಾಗೂ ಕನಿಷ್ಠ ಶುಲ್ಕ ಅನ್ವಯವಾಗುತ್ತದೆ. ಬ್ಯಾಂಕಿನಲ್ಲಿ ಸುರಕ್ಷಿತ ಪಾಲನೆಗಾಗಿ ಇಟ್ಟುಕೊಂಡ ಭದ್ರತೆಗಳ ಮೇಲೆ ಬಡ್ಡಿ ಸಂಗ್ರಹದ ಸೌಲಭ್ಯವನ್ನು ನಿಗದಿತ ಶುಲ್ಕ ಪಾವತಿಸಿ ಗ್ರಾಹಕರು ಬಳಸಿಕೊಳ್ಳಬಹುದು.
 

ಬಂಡವಾಳ ಮಾರುಕಟ್ಟೆ ಸೇವೆಗಳು

ಬಂಡವಾಳ ಮಾರುಕಟ್ಟೆ ಸೇವೆಗಳಿಗೆ ಸಂಬಂಧಿತ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ತೆರಿಗೆಗಳು ಮತ್ತು ಮನೆಬಳಕೆಗಳ ಬಿಲ್ ಪಾವತಿಗಳ ಸ್ವೀಕೃತಿ:

ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ತೆರಿಗೆಗಳು ದೂರವಾಣಿ ಬಿಲ್ಲುಗಳು, ವಿದ್ಯುತ್ ಬಿಲ್ಲುಗಳು, ನೀರಿನ ಬಿಲ್ಲುಗಳು, ಶಾಲೆಯ ಶುಲ್ಕ ಇತ್ಯಾದಿಗಳನ್ನು ಬ್ಯಾಂಕಿನ ಆಯ್ದ / ಗೊತ್ತುಪಡಿಸಿದ ಶಾಖೆಗಳಲ್ಲಿ ಸ್ವೀಕರಿಸಲಾಗುತ್ತದೆ ಹಾಗೂ ಇವುಗಳ ಸ್ವೀಕೃತಿಯ ಬಗ್ಗೆ ಆಯಾ ಶಾಖೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಸಿಂಡ್ ಬಿಲ್ ಪೇ ಎನ್ನುವ ಒಂದು ಉತ್ಪನ್ನವನ್ನು ಅಂತಹ ಮನೆಬಳಕೆಯ ಬಿಲ್ ಪಾವತಿಗಳಿಗೆ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ.

  • bullet ನಮ್ಮ ಬ್ಯಾಂಕಿನ 322 ಗೊತ್ತುಪಡಿಸಿದ ಶಾಖೆಗಳು ಚಲಾನುಗಳ (OLTAS) ಮೂಲಕ ನೇರ ತೆರಿಗೆಗಳನ್ನು ಸಂಗ್ರಹಿಸುತ್ತವೆ.
  • bullet ಇಂಟರ್ನೆಟ್ ಗ್ರಾಹಕರಿಂದ ನೇರ ತೆರಿಗೆಗಳ ಇ-ಪಾವತಿ.
  • bullet ನಮ್ಮ 189 ಗೊತ್ತುಪಡಿಸಿದ ಶಾಖೆಗಳು ಪರೋಕ್ಷ ತೆರಿಗೆಗಳನ್ನು ಸಂಗ್ರಹಿಸುತ್ತವೆ (ಸುಲಭವಾದ).
  • bullet ಕರ್ನಾಟಕ ರಾಜ್ಯ ತೆರಿಗೆಗಳನ್ನು ಇಂಟರ್ನೆಟ್ ಗ್ರಾಹಕರಿಂದ ಇ-ಪಾವತಿ ಮೂಲಕ ಸ್ವೀಕಾರ.
  • bullet ಇ-ರಶೀದಿಗಳು (ಇಎಎಸ್ಇಆರ್) ಸೇರಿದಂತೆ ಪರೋಕ್ಷ ತೆರಿಗೆಗಳ ಇ-ಪಾವತಿ.
  • bulletಕರ್ನಾಟಕ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಇ-ವ್ಯಾಟ್ ಸೌಲಭ್ಯವನ್ನು ಪರಿಚಯಿಸಲಾಗಿದೆ.

ಸರ್ಕಾರದ ವ್ಯವಹಾರಗಳು::

15-ವರ್ಷಗಳ ಸಾರ್ವಜನಿಕ ಪ್ರಾವಿಡೆಂಟ್ ಫಂಡ್ ಖಾತೆಯನ್ನು ತೆರೆಯುವ ಮತ್ತು ನಿರ್ವಹಿಸುವ ಅನುಕೂಲ, ಹಿರಿಯ ನಾಗರಿಕರ ಉಳಿತಾಯ ಯೋಜನೆ-2004, ಸುಕನ್ಯಾ ಸಮೃದ್ಧಿ ಮತ್ತು ಕಿಸಾನ್ ವಿಕಾಸ್ ಪತ್ರಗಳನ್ನು ನಮ್ಮ 70 ಶಾಖೆಗಳ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ ಹಾಗೂ ಖಾತೆದಾರರು ಬಯಸಿದಲ್ಲಿ ಈ ಖಾತೆಗಳನ್ನು ನಮ್ಮ ಬ್ಯಾಂಕಿನ ಬೇರೆ ಶಾಖೆಗಳಿಗೂ ಅಥವಾ ಅಂಚೆ ಕಚೇರಿಗೆ ವರ್ಗಾಯಿಸಬಹುದು, ಗೊತ್ತುಪಡಿಸಿದ ಶಾಖೆಗಳ ಮೂಲಕ ಭಾರತ ಸರ್ಕಾರದ ಉಳಿತಾಯ ಬಾಂಡುಗಳು, ಸೋವೆರಿನ್ ಗೋಲ್ಡ್ ಬಾಂಡುಗಳು, ಇತ್ಯಾದಿಗಳನ್ನು ಬ್ಯಾಂಕು ಮಾರಾಟ ಮಾಡುತ್ತದೆ ಹಾಗೂ ನಿರ್ವಹಿಸುತ್ತದೆ.

ಕರೆನ್ಸಿ ವಿನಿಮಯ ಸೌಲಭ್ಯ:

ಸ್ವಚ್ಛ ನೋಟು ನಿಯಮ : ಬ್ಯಾಂಕು ಸ್ವಚ್ಛ ನೋಟು ನಿಯಮ ಬದ್ಧವಾಗಿದೆ ಹಾಗೂ ಶಿಥಿಲವಾದ / ಹರಿದ / ತುಂಡಾದ ನೋಟುಗಳನ್ನು ಸಾರ್ವಜನಿಕರಿಗೆ ನೀಡುವುದಿಲ್ಲ. ನಮ್ಮ ಶಾಖೆಗಳಲ್ಲಿ / ವಿಸ್ತರಣಾ ಕೌಂಟರುಗಳಲ್ಲಿ ನೋಟುಗಳಿಗೆ ತಂತಿ (ಸ್ಟೇಪಲ್) ಹಾಕುವುದಿಲ್ಲ ಹಾಗೂ ಸಾರ್ವಜನಿಕರಿಗೆ ನೀಡಬಹುದಾದ ನೋಟುಗಳಿಗೆ ಕಾಗದದ ಪಟ್ಟಿಯನ್ನು ಮಾತ್ರ ಹಾಕಿ ನೀಡಲಾಗುತ್ತದೆ.

ಶಿಥಿಲವಾದ / ತುಂಡಾದ ನೋಟುಗಳ ವಿನಿಮಯ : ಆರ್ ಬಿ ಐ ನ ನೋಟು ಮರುಪಾವತಿ ನಿಯಮಗಳ ಪ್ರಕಾರ ಕೆಲವು ವಿಧದ ತುಂಡಾದ ನೋಟುಗಳನ್ನು ವಿನಿಮಯ ಮಾಡಲು ಎಲ್ಲಾ ಶಾಖೆಗಳಿಗೆ ಅಧಿಕಾರ ವಹಿಸಲಾಗಿದೆ. ಸಾರ್ವಜನಿಕರು ಕಚೇರಿಯ ಅವಧಿಯಲ್ಲಿ ಶಿಥಿಲವಾದ ನೋಟುಗಳನ್ನು, ನಾಣ್ಯಗಳಿಗೆ ಬದಲಾಗಿ ನೋಟುಗಳನ್ನು ಹಾಗೂ ನೋಟುಗಳನ್ನು ನಾಣ್ಯಗಳಾಗಿ ಉಚಿತವಾಗಿ ವಿನಿಮಯ ಮಾಡಿಕೊಳ್ಳಬಹುದು. ರಾಜಕೀಯ ಅಥವಾ ಧಾರ್ಮಿಕ ಘೋಷಣೆಗಳನ್ನು ಬರೆದಿರುವ ನೋಟುಗಳನ್ನು ಯಾವುದೇ ಸಂದರ್ಭಗಳಲ್ಲಿ ವಿನಿಮಯ ಮಾಡಲಾಗುವುದಿಲ್ಲ. ತುಂಡಾದ ಹಾಗೂ ಹರಿದ ನೋಟುಗಳ ವಿನಿಮಯದ ಸೌಲಭ್ಯವನ್ನು ನಮ್ಮ ಶಾಖೆಗಳಲ್ಲಿ ಪಡೆದುಕೊಳ್ಳಬಹುದು ಹಾಗೂ ಈ ಬಗ್ಗೆ ವಿವರಗಳನ್ನು ಎಲ್ಲಾ ಶಾಖೆಗಳ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುತ್ತದೆ.

ಶಿಥಿಲವಾದ ನೋಟು : ತುಂಡಾಗಿರುವ ಅಥವಾ ಅತೀ ಬಳಕೆಯ ಕಾರಣದಿಂದಾಗಿ ಹರಿದಿರುವ ಅಥವಾ ಎಣ್ಣೆ, ಬಣ್ಣ, ಮಸಿ ಇತ್ಯಾದಿಗಳಿಂದ ವಿಕಾರಗೊಂಡ ನೋಟುಗಳನ್ನು ಶಿಥಿಲಗೊಂಡ ನೋಟುಗಳೆಂದು ಪರಿಗಣಿಸಲಾಗುತ್ತದೆ. ಸುಲಭವಾಗಿ ವಿನಿಮಯ ಮಾಡಲು ಅನುಕೂಲವಾಗುವಂತೆ, ನೋಟಿನ ಸಂಖ್ಯೆ ಸರಿಯಾಗಿದ್ದು ನೋಟಿನ ಮಧ್ಯ ಭಾಗದಲ್ಲಿ ಹರಿದಿದ್ದರೆ ಅಂತಹ ನೋಟುಗಳನ್ನೂ ಶಿಥಿಲಗೊಂಡ ನೋಟುಗಳು ಎಂದು ಪರಿಗಣಿಸಲಾಗುತ್ತದೆ. ನೋಟುಗಳ ಮೇಲೆ ಏನನ್ನಾದರೂ ಬರೆದಿದ್ದರೆ ಅಂತಹ ನೋಟುಗಳು ಮರುಚಲಾವಣೆ ಆಗಬಾರದೆಂದು ಅವುಗಳನ್ನೂ ಶಿಥಿಲವಾದ ನೋಟುಗಳೆಂದು ಪರಿಗಣಿಸಲಾಗುತ್ತದೆ.

ತುಂಡಾದ ನೋಟು : ತುಂಡಾದ ನೋಟಿನ ಒಂದು ಭಾಗ ಕಳೆದುಹೋಗಿದ್ದಲ್ಲಿ ಅಥವಾ ಹಲವಾರು ತುಣುಕುಗಳಾಗಿದ್ದಲ್ಲಿ ಅಥವಾ ವಿನಿಮಯಕ್ಕೆ ನೀಡಿದ ನೋಟು ಅರ್ಧಕ್ಕಿಂತ ಹೆಚ್ಚಾಗಿದ್ದರೆ ಹಾಗೂ ನೀಡಿದ ಪ್ರತಿ ತುಂಡು, 'ನಿಗದಿತ ಅಧಿಕಾರಿ' ಆರ್ ಬಿ ಐ ನೋಟು ಮರುಪಾವತಿ ನಿಯಮಗಳಲ್ಲಿ ವಿವರಿಸಿರುವಂತೆ ಅದೇ ನೋಟಿನ ಭಾಗವೆಂದು ಗುರುತಿಸಿದಲ್ಲಿ ಅಂತಹ ನೋಟನ್ನು ತುಂಡಾದ ನೋಟು ಎಂದು ಪರಿಗಣಿಸಲಾಗುವುದು.

ನಕಲಿ / ಖೋಟಾ ನೋಟು : ನಕಲಿ / ಖೋಟಾ ನೋಟುಗಳು / ನಾಣ್ಯಗಳನ್ನು ವಿನಿಮಯಕ್ಕೆ ಸಲ್ಲಿಸಿದಲ್ಲಿ ಅಂತಹವನ್ನು ಹಿಂತಿರುಗಿಸಲಾಗುವುದಿಲ್ಲ ಹಾಗೂ ಆರ್‌ಬಿಐ ಗೆ ರವಾನಿಸಲಾಗುವುದಿಲ್ಲ ಮತ್ತು ಅವುಗಳ ಮೌಲ್ಯವನ್ನೂ ಪಾವತಿಸಲಾಗುವುದಿಲ್ಲ. ನೋಟುಗಳು ಬೇಕೆಂದೇ ಹರಿದಿದ್ದುವು ಅಥವಾ ಕತ್ತರಿಸಿದ್ದುವು ಎಂದು ಕಂಡುಬಂದಲ್ಲಿ ಅಂತಹವುಗಳನ್ನು ವಿನಿಮಯಕ್ಕೆ ಸ್ವೀಕರಿಸಲಾಗುವುದಿಲ್ಲ

  • bullet ನಾಣ್ಯ ಹಾಗೂ ನೋಟುಗಳ ಲಕ್ಷಣಗಳು. 2000, 500, 100, 50, 20 ಮತ್ತು 10
  •  

    ಗ್ರಾಹಕ ಸೇವೆ :

    ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ಬ್ಯಾಂಕು ಪಾರದರ್ಶಕತೆ ಮತ್ತು ಗ್ರಾಹಕ-ಸ್ನೇಹಿ ಮಾರ್ಗಗಳಿಗೆ ಬದ್ಧವಾಗಿದೆ.

    ಮಾಹಿತಿ ಪ್ರಸರಣ : ನ್ಯಾಯೋಚಿತ ಮತ್ತು ನಿಷ್ಪಕ್ಷಪಾತ ಬ್ಯಾಂಕಿಂಗ್ ಅಭ್ಯಾಸಗಳಿಗಾಗಿ ಬ್ಯಾಂಕು ನ್ಯಾಯಯುತ ಅಭ್ಯಾಸ ನಿಯಮ, ಮಾದರಿ ಠೇವಣಿ ನಿಯಮ, ಮತ್ತು ಇತರ ಗ್ರಾಹಕ-ಆಧಾರಿತ ನೀತಿಗಳನ್ನು ಅಳವಡಿಸಿಕೊಂಡಿದೆ ಹಾಗೂ ಈ ಕುರಿತ ಮಾಹಿತಿಯನ್ನು ಬ್ಯಾಂಕಿನ ಜಾಲತಾಣದಲ್ಲಿ ನೀಡಲಾಗಿದೆ. ಶಾಖೆಯ ಸಿಬ್ಬಂದಿಗಳು ತಮಗೆ ವಿಧಿಸುತ್ತಿರುವ ಬಡ್ಡಿ ದರಗಳು, ಸೇವಾ ಶುಲ್ಕಗಳು ಹಾಗೂ ಇತರ ಶುಲ್ಕಗಳ ಬಗ್ಗೆ ಸಾರ್ವಜನಿಕರು ತಿಳುವಳಿಕೆ ಹೊಂದಿ, ಖಚಿತ ಪಡಿಸಿಕೊಂಡು ಮುಕ್ತವಾಗಿ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ

    ಸೂಚನಾ ಫಲಕ : ಪ್ರಮುಖವಾಗಿ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಶಾಖೆಗಳಲ್ಲಿ ಮತ್ತು ವಿಸ್ತರಣೆ ಕೌಂಟರುಗಳಲ್ಲಿ ಪ್ರದರ್ಶಿಸಲಾಗುತ್ತದೆ. ಬ್ಯಾಂಕಿನ ಉತ್ಪನ್ನಗಳ / ಸೇವೆಗಳಲ್ಲಿನ ಮಾರ್ಪಾಡುಗಳನ್ನು ಹಾಗೂ ಬ್ಯಾಂಕಿನ ಯಾವುದೇ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ಶಾಖೆಗೆ ಸೂಚನಾ ಫಲಕದಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ ಒದಗಿಸಲಾಗುತ್ತದೆ.

    ಗ್ರಾಹಕರ ಪಕ್ಷ : ಬ್ಯಾಂಕಿನ ಶಾಖೆಗಳು ಗ್ರಾಹಕರ ಅಗತ್ಯತೆಗಳ ಮೇಲೆ ಕೇಂದ್ರೀಕರಿಸುವ ದೃಷ್ಟಿಯಿಂದ ವರ್ಷದಲ್ಲಿ ಹದಿನೈದು ದಿನಗಳನ್ನು (ಹದಿನೈದು ದಿನ = ಒಂದು ಪಕ್ಷ) ಗ್ರಾಹಕರ ಪಕ್ಷವಾಗಿ ಆಚರಿಸುತ್ತವೆ.

    ಗ್ರಾಹಕ ದಿನ ಗ್ರಾಹಕರ ದೂರುಗಳನ್ನು ಕೇಳಲು ಮತ್ತು ಪರಿಹರಿಸಲು ಬ್ಯಾಂಕಿನ ಎಲ್ಲಾ ಶಾಖೆಗಳು ಮತ್ತು ಪ್ರಾದೇಶಿಕ ಕಚೇರಿಗಳು ಪ್ರತಿ ತಿಂಗಳ 15ನೇ ತಾರೀಖಿನಂದು ಗ್ರಾಹಕ ದಿನಾಚರಣೆಯಾಗಿ ಆಚರಿಸುತ್ತವೆ ಹಾಗೂ ಆ ದಿನ 3.00 ರಿಂದ 5.00 ರ ವರೆಗೆ ಗ್ರಾಹಕರ ದೂರುಗಳನ್ನು ಆಲಿಸಲು ಮತ್ತು ಪರಿಹರಿಸಲು ಶಾಖೆಯ ಮುಖ್ಯಸ್ಥರು / ಪ್ರಾದೇಶಿಕ ಕಚೇರಿಯ ಮುಖ್ಯಸ್ಥರು ಲಭ್ಯವಿರುತ್ತಾರೆ. 15ನೇ ತಾರೀಖು ರಜಾದಿನವಾದಲ್ಲಿ ಗ್ರಾಹಕ ದಿನವನ್ನು ಆನಂತರದ ಕೆಲಸದ ದಿನದಂದು ಆಚರಿಸಲಾಗುತ್ತದೆ

    ಗ್ರಾಹಕರ ಭೇಟಿ : ಶಾಖೆಯ / ಬ್ಯಾಂಕಿನ ಕೆಲಸದ ಬಗ್ಗೆ ತಮ್ಮ ಸಲಹೆಗಳನ್ನು ನೀಡಲು ಗ್ರಾಹಕರಿಗೆ ಸಾರ್ವಜನಿಕ ವೇದಿಕೆಯನ್ನು ಒದಗಿಸಲು ಎಲ್ಲಾ ಶಾಖೆಗಳು ವರ್ಷಕ್ಕೊಮ್ಮೆ ಗ್ರಾಹಕರ ಭೇಟಿಯನ್ನು ಆಯೋಜಿಸುತ್ತವೆ.

    ನಾನು ನಿಮಗೆ ಸಹಾಯ ಮಾಡಲೇ ಕೌಂಟರ್ : ವಿವಿಧ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸುವಲ್ಲಿ ಗ್ರಾಹಕರಿಗೆ ಸಹಾಯವನ್ನು ಒದಗಿಸಲು ಮತ್ತು ಬ್ಯಾಂಕಿನ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸಲು ಆಯ್ದ ಶಾಖೆಗಳಲ್ಲಿ ‘ ನಾನು ನಿಮಗೆ ಸಹಾಯ ಮಾಡಲೇ’ ಕೌಂಟರುಗಳನ್ನು ಒದಗಿಸಲಾಗಿದೆ.

    ಹೊರಗಿನ / ಸ್ಥಳೀಯ ಚೆಕ್ಕುಗಳ ತ್ವರಿತ ಜಮೆ : ಖಾತೆಯ ಸರಿಯಾದ ನಡವಳಿಕೆಯ ಬಗ್ಗೆ ತೃಪ್ತಿಪಡಿಸಿದ ನಂತರ, 15,000 / ವರೆಗಿನ ಹೊರಗಿನ / ಸ್ಥಳೀಯ ಚೆಕ್ಕುಗಳನ್ನು ಗ್ರಾಹಕರ ಖಾತೆಗಳಿಗೆ ಸಾಮಾನ್ಯ ಸಂಗ್ರಹಣೆ ಶುಲ್ಕ ವಿಧಿಸಿ ತಕ್ಷಣ ಜಮೆಯ ಸೌಲಭ್ಯವನ್ನು ಒದಗಿಸಲಾಗುವುದು.

    ವ್ಯವಹಾರಗಳ ಗೌಪ್ಯತೆ : ಸಾರ್ವಜನಿಕರ ಬ್ಯಾಂಕಿನ ವ್ಯವಹಾರಗಳು / ವಹಿವಾಟುಗಳು / ಖಾತೆಯ ಮಾಹಿತಿಯನ್ನು ಕಾನೂನಿನ ಪ್ರಕಾರ ಬಹಿರಂಗಪಡಿಸುವಿಕೆಯ ಅಗತ್ಯವಿಲ್ಲದಿದ್ದರೆ, ಅವುಗಳನ್ನು ಗೌಪ್ಯವಾಗಿರಿಸಲಾಗುತ್ತದೆ.

    ಸಣ್ಣ ಮೌಲ್ಯದ ನೋಟುಗಳ ಸ್ವೀಕೃತಿ :ಡ್ರಾಫ್ಟ್, ಇತ್ಯಾದಿಯಂತಹ ವ್ಯವಹಾರಗಳಿಗೆ ಗ್ರಾಹಕರು ಸಣ್ಣ ಮೌಲ್ಯದ ನೋಟುಗಳನ್ನು ಸಲ್ಲಿಸಿದಲ್ಲಿ, ಶಾಖೆಗಳು ಅವುಗಳನ್ನು ಸ್ವೀಕರಿಸುತ್ತವೆ ಹಾಗೂ ಅಂತಹ ಅಂಗೀಕಾರಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ.

    ಗ್ರಾಹಕ ಸೇವಾ ಸಮಿತಿ :ಸಾರ್ವಜನಿಕರು ಎದುರಿಸುತ್ತಿರುವ ದೂರುಗಳು, ಸಲಹೆಗಳನ್ನು, ತೊಂದರೆಗಳನ್ನು ಅಧ್ಯಯನ ಮಾಡಲು ಹಾಗೂ ಸಲ್ಲಿಸಿದ ಸೇವೆಯ ಗುಣಮಟ್ಟದ ಸುಧಾರಣೆಯ ಮಾರ್ಗಗಳು ಮತ್ತು ವಿಧಾನಗಳನ್ನು ಸೂಚಿಸಲು ಹಾಗೂ ಸಾರ್ವಜನಿಕರ ನಿರೀಕ್ಷೆಗೆ ತಲುಪಲು ಎಲ್ಲಾ ಶಾಖೆಗಳು ಮತ್ತು ಪ್ರಾದೇಶಿಕ ಕಛೇರಿಗಳು / ಜನರಲ್ ಮ್ಯಾನೇಜರ್ ಕಛೇರಿಗಳು ಸೇರಿ ಗ್ರಾಹಕ ಸೇವಾ ಸಮಿತಿಗಳನ್ನು ರೂಪಿಸುತ್ತವೆ.

    ದೂರು / ಸಲಹಾ ಪೆಟ್ಟಿಗೆ : ಸಲಹೆಗಳನ್ನು ನೀಡಲು ಅಥವಾ ದೂರು ಸಲ್ಲಿಸಲು ಅಥವಾ ಗ್ರಹಿಸಿದ ಕೊರತೆಗಳನ್ನು ತಿಳಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ಶಾಖೆಗಳಲ್ಲಿ / ವಿಸ್ತರಣಾ ಕೌಂಟರುಗಳ ಮುಖ್ಯ ಸ್ಥಳದಲ್ಲಿ ದೂರು / ಸಲಹಾ ಪೆಟ್ಟಿಗೆಯನ್ನು ಸ್ಥಾಪಿಸಲಾಗಿರುತ್ತದೆ. ಪೆಟ್ಟಿಗೆಯನ್ನು ಪ್ರತಿ ದಿನವೂ ತೆರೆಯಲಾಗುತ್ತದೆ ಹಾಗೂ ಸಲಹೆ / ದೂರುಗಳನ್ನು ತಕ್ಷಣವೇ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ.

    ದೂರು ಪುಸ್ತಕ : ಸಾರ್ವಜನಿಕರು ದೂರು ನೀಡಲು ಅನುಕೂಲವಾಗುವಂತೆ ಎಲ್ಲಾ ಶಾಖೆಗಳಲ್ಲಿ / ಕಚೇರಿಗಳಲ್ಲಿ ದೂರು ಪುಸ್ತಕ ಲಭ್ಯವಿರುತ್ತದೆ

    ಫಲಕಗಳ ಪ್ರದರ್ಶನ : ಕುಂದುಕೊರತೆಗಳನ್ನು ನಿವಾರಿಸಲು ಮೇಲ್ಮನವಿ ಸಲ್ಲಿಸಲು ಸಂಪರ್ಕಿಸಬೇಕಾದ ಅಧಿಕೃತ ಅಧಿಕಾರಿಯ ಹೆಸರು ಮತ್ತು ವಿಳಾಸವನ್ನು ಮುಖ್ಯವಾಗಿ ಎಲ್ಲಾ ಶಾಖೆಗಳಲ್ಲಿ ಮತ್ತು ಕಚೇರಿಗಳಲ್ಲಿ ಪ್ರದರ್ಶಿಸಲಾಗುತ್ತದೆ. ಗ್ರಾಹಕರ ದೂರುಗಳ ಪರಿಹಾರಕ್ಕೆ ಆಯಾ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಬ್ಯಾಂಕಿಂಗ್ ತನಿಖಾಧಿಕಾರಿಯ ಕಚೇರಿಯ ವಿಳಾಸವನ್ನು ಸಹ ಫಲಕದಲ್ಲಿ ಪ್ರದರ್ಶಿಸಲಾಗುತ್ತದೆ.

    ಕುಂದುಕೊರತೆಗಳ ನಿವಾರಣೆ : ಗ್ರಾಹಕರ ದೂರುಗಳನ್ನು ತ್ವರಿತವಾಗಿ ಪರಿಹರಿಸುವುದನ್ನು ಖಾತರಿಪಡಿಸಿಕೊಳ್ಳಲು ಬ್ಯಾಂಕು ಎಲ್ಲಾ ಪ್ರಾದೇಶಿಕ ಕಚೇರಿಗಳು, ಜನರಲ್ ಮ್ಯಾನೇಜರ್ ಕಛೇರಿಗಳು ಹಾಗೂ ಬೆಂಗಳೂರಿನ ಕಾರ್ಪೊರೇಟ್ ಕಚೇರಿಯಲ್ಲಿ ಗ್ರಾಹಕರ ಕುಂದುಕೊರತೆ ಪರಿಹಾರ ಕೋಶಗಳನ್ನು ರೂಪಿಸಿದೆ. ಘಟಕಗಳ ಕುಂದುಕೊರತೆಗಳನ್ನು ಪರಿಶೀಲಿಸುವುದರ ಜೊತೆಗೆ ಈ ಕೋಶಗಳು ಕಾರ್ಯಾಚರಣೆಯ ಪ್ರದೇಶದಲ್ಲಿ ಗ್ರಾಹಕರ ಸೇವೆಯನ್ನು ಉತ್ತಮಗೊಳಿಸಲು ಕ್ರಮಗಳನ್ನು ಕೈಗೊಳ್ಳುತ್ತವೆ. ಕುಂದುಕೊರತೆ ಪರಿಹಾರ ಕಾರ್ಯವಿಧಾನವು ಕೆಳಗಿನಂತಿರುತ್ತದೆ.

    • bullet ದೂರುಗಳನ್ನು ಸ್ವೀಕರಿಸಿದಾಗ ಶಾಖೆ / ಕಚೇರಿಯಿಂದ ಅದನ್ನು ಅಂಗೀಕರಿಸಲಾಗುವುದು.
    • bullet ಶಾಖೆಯ ಮುಖ್ಯಸ್ಥರು ಅಸ್ತಿತ್ವದಲ್ಲಿರುವ ನಿಯಮಗಳ ಮತ್ತು ಮಾರ್ಗದರ್ಶಿಯ ಅನ್ವಯ ದೂರುಗಳನ್ನು ಗಮನಿಸುತ್ತಾರೆ ಹಾಗೂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ತೆಗೆದುಕೊಂಡ ಕ್ರಮಗಳನ್ನು ದೂರುದಾರರಿಗೆ ತಿಳಿಸುತ್ತಾರೆ.
    • bullet ದೂರು ಸ್ವೀಕರಿಸಿದ ನಂತರ ಪ್ರಾದೇಶಿಕ ಕಛೇರಿಯು ಸಂಬಂಧಪಟ್ಟ ಶಾಖೆಯೊಂದಿಗೆ ಅಗತ್ಯವಾದ ವಿಚಾರಣೆಯನ್ನು ಮಾಡುತ್ತದೆ ಹಾಗೂ ದೂರನ್ನು ಪರಿಹರಿಸಲು ಅವಶ್ಯಕ ಕ್ರಮಗಳನ್ನು ಪ್ರಾರಂಭಿಸುತ್ತದೆ.
    • bullet ದೂರುಗಳನ್ನು ಪರಿಹರಿಸಲು ಎಲ್ಲಾ ಹಂತಗಳಲ್ಲಿ ಸೂಕ್ತ ಕ್ರಮವನ್ನು ಪ್ರಾರಂಭಿಸಲಾಗುವುದು ಹಾಗೂ ನಿಗದಿತ ಸಮಯಕ್ಕೆ ದೂರುದಾರರಿಗೆ ಈ ಸಂಬಂಧಿ ವಿಷಯಗಳನ್ನು ವಿವರಿಸಲಾಗುವುದು.
    • bullet ಬಾಧಿತ ಸಾರ್ವಜನಿಕರು ಈ ವಿಷಯದ ಕುರಿತು ಈ ಕೆಳಗೆ ನೀಡಿರುವ ವಿಳಾಸದಲ್ಲಿ ಚೇರ್ಮನ್ ಹಾಗೂ ನಿರ್ವಾಹಕ ನಿರ್ದೇಶಕರು ಅಥವಾ ಕಾರ್ಯನಿರ್ವಾಹಕ ನಿರ್ದೇಶಕ ಅಥವಾ ಪ್ರಧಾನ ವ್ಯವಸ್ಥಾಪಕರು (ಯೋಜನಾ ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ಇಲಾಖೆ) ಇವರ ಗಮನಕ್ಕೆ ತರಬಹುದು.

      ಸಿಂಡಿಕೇಟ್ ಬ್ಯಾಂಕ್,
      ಕಾರ್ಪೊರೇಟ್ ಕಚೇರಿ
      2ನೇ ಅಡ್ಡರಸ್ತೆ, ಗಾಂಧಿನಗರ
      ಬೆಂಗಳೂರು, - 560 009
      ಕರ್ನಾಟಕ

      ಸಿಂಡಿಕೇಟ್ ಬ್ಯಾಂಕ್,
      ಪ್ರಧಾನ ಕಚೇರಿ,
      ಮಣಿಪಾಲ, - 576 104
      ಕರ್ನಾಟಕ



    • bullet ದೂರುಗಳ ಪರಿಹಾರ ಸಾರ್ವಜನಿಕರಿಗೆ ತೃಪ್ತಿಕರವಾಗದಿದ್ದಲ್ಲಿ, ಅತೃಪ್ತ ಸಾರ್ವಜನಿಕರು ಶಾಖೆ / ಕಚೇರಿಯ ಕಾರ್ಯಾಚರಣೆಯ ವ್ಯಾಪ್ತಿಯ ಬ್ಯಾಂಕಿಂಗ್ ತನಿಖಾಧಿಕಾರಿಗೆ ದೂರುಗಳ ಕುರಿತು ಮೇಲ್ಮನವಿ ಸಲ್ಲಿಸಬಹುದು.

     

    longbanner

    ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

    2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು