Syndicate Bank
banner

ಸಿಂಡ್ ವಸೀಯತ್

GoDigital

ಎನ್.ಎಸ್.ಡಿ.ಎಲ್. ಇ-ಗವರ್ನನ್ಸ್ ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎನ್.ಎಸ್.ಡಿ.ಎಲ್. ಇ-ಗವ್) ಮತ್ತು ವಾರ್ಮೊಂಡ್ ಟ್ರಸ್ಟೀಸ್ ಆ್ಯಂಡ್ ಎಕ್ಸಿಕ್ಯೂಟರ್ಸ್ ಪ್ರೈವೇಟ್ ಲಿಮಿಟೆಡ್ (ವಾರ್ಮೊಂಡ್) ಇವರ ಸಹಯೋಗದಲ್ಲಿ ಸಿಂಡಿಕೇಟ್ ಬ್ಯಾಂಕ್ ಕಂಪ್ಯೂಟರೀಕೃತ “ಸಿಂಡ್ ವಸೀಯತ್-ಈಜಿ ವಿಲ್” ಎನ್ನುವ ಹೆಸರಿನಲ್ಲಿ ವಿಲ್ ಸಿದ್ಧಪಡಿಸಲು ದತ್ತಾಂಶ (ಡೇಟಾ) ಸಲ್ಲಿಕೆಗೆ ಮೂರನೆಯ ಕಕ್ಷಿಯ ಸೇವೆಯನ್ನು ಒದಗಿಸುತ್ತಿದೆ.

ಎನ್.ಎಸ್.ಡಿ.ಎಲ್. ಇ-ಗವ್ ಈಜಿವಿಲ್‌ನ್ನು ಅಭಿವೃದ್ಧಿ ಪಡಿಸಿದೆ, ಪ್ಲಾಟ್‌ಫಾರ್ಮನ್ನು ಹೋಸ್ಟ್ ಮಾಡಿದೆ ಮತ್ತು ಸೂಕ್ತ ದತ್ತಾಂಶವನ್ನು ಒದಗಿಸುವ ಮೂಲಕ ವಿಲ್ ಸಿದ್ಧಪಡಿಸುವಿಕೆಯ ಮನವಿಯನ್ನು ಸುಲಭಮಾಡಲು ಮೂಲಸೌಕರ್ಯ ರಚಿತ ಸ್ವರೂಪದಲ್ಲಿ ಕ್ರಮಬದ್ಧವಾಗಿ ನಿರ್ವಹಿಸುತ್ತಿದೆ. ಗ್ರಾಹಕರು ಸಲ್ಲಿಸಿದ ದತ್ತಾಂಶವನ್ನು ಅಧ್ಯಯನ ಮಾಡಿ ಗ್ರಾಹಕರ ಪರವಾಗಿ ವಿಲ್ ಸಿದ್ಧಪಡಿಸಲು ಮತ್ತು ಬರೆಯಲು ವಾರ್ಮೊಂಡ್ ಕಾನೂನು ತಜ್ಞರು/ವಕೀಲರನ್ನು ನೇಮಿಸಿದೆ. ವಿಲ್ ನ್ನು ಗ್ರಾಹಕರಿಗೆ ಇಮೇಲ್, ಕೊರಿಯರ್, ಅಥವಾ ನೆರವಾಗಿ ತನ್ನ ಪ್ರತಿನಿಧಿಗಳ ಮೂಲಕ ತಲುಪಿಸುವ (ಆಯ್ದ ನಗರಗಳಲ್ಲಿ ) ವ್ಯವಸ್ಥೆಯನ್ನು ವಾರ್ಮೊಂಡ್ ಮಾಡಿದೆ.

ಆನ್‍ಲೈನ್ಈಜಿವಿಲ್‌ನ ಅನುಕೂಲಗಳು :

ಸಿಂಡ್ ವಸೀಯತ್ ಸೇವೆಯನ್ನು ಒಂದು ಮೌಲ್ಯವರ್ಧಿತ ಸೇವೆಯಾಗಿ ಗ್ರಾಹಕರಿಗೆ ಒದಗಿಸಲಾಗುತ್ತಿದೆ.

  • andhra ವಿಲ್ ಬರೆಯಲು ಸುಲಭವಾಗಿ ರೂಪಿತವಾದ ನಮೂನೆ ಆಧಾರಿತ ಆನ್‍ಲೈನ್ ವಿಧಾನ
  • andhra ಅರ್ಜಿ ತುಂಬಲು ಸಲಹೆಗಳು / ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳ ಸ್ವರೂಪದಲ್ಲಿ ಕಾನೂನು ತಜ್ಞರಿಂದ ಮಾರ್ಗದರ್ಶಿ
  • andhra ಉಪಯೋಗಿಸುವವರು ತಮಗೆ ಬೇಕಾದ ಸಮಯದಲ್ಲಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸುವ ಅನುಕೂಲತೆ.
  • andhra ವಿಲ್ ಪ್ರಕ್ರಿಯೆಯ ಸಿದ್ಧಪಡಿಸುವ ಸುರಕ್ಷಿತ ಮತ್ತು ಭದ್ರ ವಿಧಾನ
  • andhra ಅವಶ್ಯಕ ವಿವರಗಳನ್ನು ಒದಗಿಸಿದ ಮತ್ತು ಪರಿಶೀಲಿಸಿದ ನಂತರ ಹಣ ಪಾವತಿ ಮಾಡಬಹುದು
  • andhra ಆಸ್ತಿ ಹಂಚಿಕೆಯ ಸರಳ ಮತ್ತು ಅನುಕೂಲಕರ ವಿಧಾನ

ಮೂರು ಸುಲಭ ಹಂತಗಳಲ್ಲಿ ನಿಮ್ಮ ವಿಲ್ಲನ್ನು ನೀವೇ ಬರೆಯಿರಿ.

  • andhra  ನೋಂದಾಯಿಸಿಕೊಳ್ಳಿ ಮತ್ತು ಆನ್‍ಲೈನ್ ಪ್ರಶ್ನಾವಳಿಗಳನ್ನು ಪೂರ್ಣಗೊಳಿಸಿರಿ.
    ವಿಲ್ ಸಿದ್ಧಪಡಿಸಲು ಅವಶ್ಯಕ ದತ್ತಾಂಶವನ್ನು ಒಗ್ಗೂಡಿಸುವಂತೆ ಕ್ರಮಬದ್ಧವಾಗಿ ರೂಪಿಸಲಾದ ನಮೂನೆಯನ್ನು ತುಂಬಿ ವಿವರಗಳನ್ನು ಒದಗಿಸಿರಿ

  • andhra  ಪರಿಶೀಲಿಸಿ, ಸಲ್ಲಿಸಿ, ಹಣ ಪಾವತಿ ಮಾಡಿರಿ
    ಮೊದಲನೆಯ ಹಂತದಲ್ಲಿ ಒದಗಿಸಲಾದ ದತ್ತಾಂಶವನ್ನು ಪರಿಶೀಲಿಸಿ, ತೃಪ್ತಿಕರವಾದಲ್ಲಿ, ವಿಲ್ ಸಿದ್ಧಪಡಿಸಲು ಸಲ್ಲಿಸಿ. ಹಣ ಪಾವತಿ ಮಾಡಿ (ಆನ್‍ಲೈನ್ / ಆಫ್ ‌ಲೈನ್)

  • andhra ಕಾನೂನುಬದ್ಧವಾಗಿ ತಯಾರಾದ ಅಂತಿಮ ವಿಲ್ ನಿಮ್ಮ ಕೈಯಲ್ಲಿದೆ.
    ನಿಮ್ಮ ಪರಿಶೀಲನೆಗೆ ಕಳುಹಿಸಿದ ವಿಲ್ ನಿಮಗೆ ತೃಪ್ತಿಕರವಾದಲ್ಲಿ ಅಂತಿಮ ವಿಲ್ಲನ್ನು ನಿಮಗೆ ಇಮೇಲ್ ಮೂಲಕ ಕಳುಹಿಸಲಾಗುವುದು. 

longbanner rect1 rect2 rect3 rect4

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು