Syndicate Bank
banner
 

ಹೂಡಿಕೆದಾರರ ಹಕ್ಕು

 
  • ಚೆಕ್ಕು ನಗದಿಗೆ ಪರಿವರ್ತನೆಯಾದ ದಿನಾಂಕದಿಂದ 7 ದಿನಗಳಲ್ಲಿ ಬಾಂಡ್ ನೀಡಲಾಗುತ್ತದೆ
  • ಅರ್ಜಿ ಸಲ್ಲಿಸಿದ ದಿನಾಂಕದಿಂದ 5 ದಿನಗಳಲ್ಲಿ ಹೊಂದಿರುವ ಪ್ರಮಾಣಪತ್ರವನ್ನು ನೀಡಲಾಗುತ್ತದೆ
  • ಚಂದಾದಾರಿಕೆಯು ನಗದಾಗಿದ್ದಲಿ ಅದೇ ದಿನಾಂಕದಿಂದ ಅಥವಾ ಚೆಕ್ಕಾಗಿದ್ದಲ್ಲಿ ಅದು ನಗದಾಗಿ ಪರಿವರ್ತನೆಯಾದ ದಿನಾಂಕದಿಂದ ಬಾಂಡ್ ಮೇಲಿನ ಬಡ್ಡಿಯು ಸಂದಾಯವಾಗುತ್ತದೆ. ಅರ್ಧ ವರ್ಷದ ಬಡ್ಡಿ ಆದೇಶ ಪತ್ರಗಳನ್ನು ನಿಗದಿತ ದಿನಾಂಕದಿಂದ ಒಂದು ತಿಂಗಳು ಮುಂಚಿತವಾಗಿ ರವಾನಿಸಲಾಗುವುದು
  • 1, ಫೆಬ್ರುವರಿ / 1 ನೇ ಆಗಸ್ಟ್ ದಿನಾಂಕದಂದು ಬಡ್ಡಿಯನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಅಥವಾ ಇತ್ತೀಚಿಗೆ ನೋಂದಾಯಿಸಿದ ವಿಳಾಸದಲ್ಲಿ ಬಡ್ಡಿಯ ಆದೇಶ ಪತ್ರವನ್ನು ರವಾನೆ ಮಾಡಲಾಗುವುದು.
  • ಬಡ್ಡಿಯ ಸೂಚನೆಯನ್ನು ನಿಗದಿತ ದಿನಾಂಕದ ಒಂದು ತಿಂಗಳ ಮುಂಚಿತವಾಗಿ ಹೂಡಿಕೆದಾರನಿಗೆ ನೀಡಲಾಗುವುದು
  • ಏಕಸ್ವಾಮ್ಯ ಹೊಂದಿದ ಹೂಡಿಕೆದಾರರು ಬಾಂಡುಗಳ ಹಕ್ಕುದಾರರಾಗಿ ಒಬ್ಬ ಅಥವಾ ಹೆಚ್ಚಿನ ವ್ಯಕ್ತಿಗಳ ನಾಮನಿರ್ದೇಶನ ಮಾಡಬಹುದು. ಅನಿವಾಸಿ ಭಾರತೀಯ ವ್ಯಕ್ತಿಗಳನ್ನು ಸಹ ನಾಮನಿರ್ದೇಶನ ಮಾಡಬಹುದು.
  • ನಾಮನಿರ್ದೇಶನವನ್ನು ಬಾಂಡ್ ವಿತರಣೆ ಮಾಡುವ ಕಚೇರಿಯಲ್ಲಿ ನೋಂದಾಯಿಸಲಾಗುವುದು ಮತ್ತು ನೋಂದಣಿ ಪ್ರಮಾಣಪತ್ರವನ್ನು ಹೂಡಿಕೆದಾರರಿಗೆ ನೀಡಲಾಗುವುದು
  • ಹೊಸ ನಾಮನಿರ್ದೇಶನವನ್ನು ನೋಂದಾಯಿಸುವುದರ ಮೂಲಕ ನಾಮನಿರ್ದೇಶನವನ್ನು ಬದಲಿಸಬಹುದು
  • ವಿತರಣಾ ಕಚೇರಿಗೆ ವಿನಂತಿಸಿಕೊಳ್ಳುವುದರ ಮೂಲಕ ಪ್ರಸಕ್ತ ನಾಮನಿರ್ದೇಶನವನ್ನು ರದ್ದು ಮಾಡಬಹುದು.
  • ಹೂಡಿಕೆಯ ದಿನಾಂಕದಿಂದ ಆರು ವರ್ಷಗಳ ಅವಧಿ ಮುಗಿದ ನಂತರ ಬಿಡುಗಡೆಯಾಗುವುದು
  • ನಿಗದಿತ ಅವಧಿಗೆ ಮುನ್ನವೇ ಬಿಡುಗಡೆಯ ಸೌಲಭ್ಯ ಲಭ್ಯವಿರುವುದಿಲ್ಲ
  • ಬಿಡುಗಡೆಯ ದಿನಾಂಕದಿಂದ ಐದು ಕೆಲಸದ ದಿನಗಳಲ್ಲಿ ಮರುಪಾವತಿ ಮೊತ್ತವನ್ನು ಹೂಡಿಕೆದಾರರಿಗೆ ಪಡೆಯುವ ಅಧಿಕಾರವಿದೆ
  • ಅರ್ಧ ವಾರ್ಷಿಕ ಬಡ್ಡಿ / ಬಿಡುಗಡೆಯ ಹಣ ಪಾವತಿಸುವ ಸೌಲಭ್ಯವನ್ನು ಇ ಸಿ ಎಸ್ ಮೂಲಕ ಅಥವಾ ಬ್ಯಾಂಕ್ ಖಾತೆಗೆ ನೇರ ಜಮೆ ಮಾಡಲು ಕೋರುವ ಮೂಲಕ ಪಡೆಯಬಹುದು. ಬಡ್ಡಿ / ಬಿಡುಗಡೆಯ ಆದಾಯವನ್ನು ಸ್ವೀಕರಿಸುವಲ್ಲಿ ವಿಳಂಬವನ್ನು ತಪ್ಪಿಸಲು ಅರ್ಜಿದಾರರು ತಮ್ಮ ಆಯ್ಕೆಯನ್ನು ಸೂಚಿಸಬಹುದು.
  • ಶಾಖೆಗಳು ಮೇಲೆ ನೀಡಿದ ಕ್ರಮಗಳನ್ನು ಅನುಸರಿಸದಿದ್ದಲ್ಲಿ, ನೀವು ಕೌಂಟರಿನಲ್ಲಿ ಒದಗಿಸಲಾಗುವ ಅರ್ಜಿ ನಮೂನೆಯಲ್ಲಿ ದೂರು ಬರೆದು ಈ ಕೆಳಗೆ ನೀಡಿದ ಪ್ರಧಾನ ಕಚೇರಿಯ ವಿಳಾಸಕ್ಕೆ ದೂರು ಸಲ್ಲಿಸಬಹುದು:

ಸಹಾಯಕ ಪ್ರಧಾನ ವ್ಯವಸ್ಥಾಪಕರು (ಅಕೌಂಟ್ಸ್), 
ಸಿಂಡಿಕೇಟ್ ಬ್ಯಾಂಕ್, 
ಪ್ರಧಾನ ಕಛೇರಿ, 
ಮಣಿಪಾಲ್ – 576 104. 
ಕರ್ನಾಟಕ ರಾಜ್ಯ

 
longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು