Syndicate Bank
banner
 

ಭಾರತೀಯ ನಿವಾಸಿ ವಿದೇಶಿ ಕರೆನ್ಸಿ ಖಾತೆಗಳು (ಆರ್.ಎಫ್.ಸಿ, ಖಾತೆಗಳು)

 
  • bulletಆರ್.ಬಿ.ಐ. 1992 ರಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿತು. ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಭಾರತದ ಹೊರಗೆ ವಾಸಿಸುತ್ತಿರುವ ಮತ್ತು 18.04.1992 ರಂದು ಅಥವಾ ಆನಂತರ ಭಾರತೀಯ ನಿವಾಸಿ ಎನ್.ಆರ್.ಐ.ಗಳು ಆರ್.ಎಫ್.ಸಿ ಖಾತೆಯನ್ನು ತೆರೆಯಬಹುದು ಮತ್ತು ನಿರ್ವಹಿಸಬಹುದು.

  • bulletಎಲ್ಲ ವ್ಯಾವಹಾರಿಕ ಉದ್ದೇಶಗಳಿಗಾಗಿ ಈ ಖಾತೆಗಳನ್ನು ಭಾರತೀಯ ನಿವಾಸಿ ಖಾತೆಗಳೆಂದು ಪರಿಗಣಿಸಲಾಗುವುದು ಮತ್ತು ಗಳಿಸಿದ ಬಡ್ಡಿಯು ತೆರಿಗೆಗೆ ಅನ್ವಯವಾಗುವುದು.

  • bulletಚಾಲ್ತಿ, ಉಳಿತಾಯ (ಚೆಕ್ ಸೌಲಭ್ಯವಿಲ್ಲದ) ಮತ್ತು ಸ್ಥಿರ ಕಾಲಾವಧಿ ಠೇವಣಿ ಖಾತೆಗಳನ್ನು ತೆರೆಯಬಹುದು.

  • bulletನೇರ ಹಣ ರವಾನೆ, ಚೆಕ್ಕು, ಡ್ರಾಫ್ಟ್, ಟ್ರಾವೆಲ್ಲರ್ ಚೆಕ್ ಮತ್ತು ಎನ್.ಆರ್.ಇ, / ಎಫ್‌ಸಿಎನ್‌ಆರ್ (ಬಿ) ಖಾತೆಗಳನ್ನು ಪರಿವರ್ತಿಸುವ ಮೂಲಕ ಆರ್.ಎಫ್.ಸಿ ಖಾತೆಗಳನ್ನು ತೆರೆಯಬಹುದು.

  • bulletಆರ್.ಎಫ್.ಸಿ ಖಾತೆಗಳಿಗೆ ಯಾವುದೇ ಅಂಗೀಕೃತ ಕರೆನ್ಸಿಯನ್ನು ಸ್ವೀಕರಿಸಬಹುದು ಮತ್ತು ನಿರ್ವಹಿಸಬಹುದು. ಪ್ರಸ್ತುತದಲ್ಲಿ, ಯುಎಸ್‌ಡಿ, ಜಿಬಿಪಿ, ಇಯುಆರ್, ಸಿಎಡಿ, ಮತ್ತು ಎಯುಡಿ ಕರೆನ್ಸಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.

  • bulletಕನಿಷ್ಠ ಮೊತ್ತದ ಠೇವಣಿಯನ್ನೂ ಸೇರಿಸಿ, ಎಫ್‌ಸಿಎನ್‌ಆರ್ (ಬಿ) ಸ್ಥಿರ ಕಾಲಾವಧಿ ಠೇವಣಿಗೆ ಅನ್ವಯವಾಗುವ ಎಲ್ಲ ಷರತ್ತು ಮತ್ತು ನಿಬಂಧನೆಗಳ ಮೇರೆಗೆ ಆರ್.ಎಫ್.ಸಿ ಟಿ.ಡಿ ಯನ್ನು ತೆರೆಯಬಹುದು.

  • bulletಆರ್.ಎಫ್.ಸಿ ಖಾತೆಗಳನ್ನು ಜಂಟಿಯಾಗಿ ಭಾರತೀಯ ನಿವಾಸಿ, ನಿಕಟ, ಸಂಬಂಧಿಗಳನ್ನು (ಕಂಪನಿ ಕಾಯಿದೆ 1956 ರ ಸೆಕ್ಷನ್ 6 ರಲ್ಲಿ ಉಲ್ಲೇಖಿಸಿರುವ ವ್ಯಾಖ್ಯಾನದ ಪ್ರಕಾರ “ಸಂಬಂಧಿಗಳು”) ಜಂಟಿ ಖಾತೆದಾರರಾಗಿಸಬಹುದು. ಆದರೆ, ಜoಟಿ ಖಾತೆದಾರನಾಗಿ ಅರ್ಹತೆ ಪಡೆದ ಈ ಭಾರತೀಯ ನಿವಾಸಿ, ನಿಕಟ ಸಂಬಂಧಿ ಖಾತೆದಾರನ ಜೀವಿತಾವಧಿಯಲ್ಲಿ ಖಾತೆಯನ್ನು ನಿರ್ವಹಿಸಲು ಅರ್ಹರಾಗುವುದಿಲ್ಲ.

  • bulletಮಾರುಕಟ್ಟೆಯ ದರದ ಆಧಾರದ ಮೇಲೆ ಬಡ್ಡಿಯ ದರವನ್ನು ಕಾಲಕಾಲಕ್ಕೆ ಬ್ಯಾಂಕು ನಿಗದಿಪಡಿಸುತ್ತದೆ.

  • ಅನುಮತಿ ಇರುವ ಜಮೆಗಳು

    • bulletಭಾರತದ ಹೊರಗಿನಿಂದಲೇ ಸಾಮಾನ್ಯ ಬ್ಯಾಂಕಿಂಗ್ ಚಾನೆಲ್ ಮೂಲಕ ಪರಿವರ್ತಿಸಬಹುದಾದ ವಿದೇಶಿ ಕರೆನ್ಸಿಯ ರವಾನೆ.

    • bulletಭಾರತಕ್ಕೆ ಮರಳುವ ಮೊದಲು ಅರ್ಹ ವ್ಯಕ್ತಿಯು ಹೊರದೇಶದಲ್ಲಿ ಮಾಡಿದ ಕೆಲಸದಿಂದ ದೊರೆತ ಪಿಂಚಣಿ ಅಥವಾ ಇತರ ಆರ್ಥಿಕ ಲಾಭ,ಸಾಮಾನ್ಯ ಬ್ಯಾಂಕಿಂಗ್ ಮೂಲಕ ಸ್ವೀಕರಿಸಲ್ಪಟ್ಟ ಪರಿವರ್ತಿಸಬಹುದಾದ ವಿದೇಶಿ ಕರೆನ್ಸಿ.

    • bulletಆರ್.ಎಫ್.ಸಿ ಖಾತೆಯ ಮೇಲೆ ಬಡ್ಡಿ.

    • bulletಅರ್ಹ ವ್ಯಕ್ತಿಗಳಿಂದ ಭಾರತಕ್ಕೆ ತಂದ ವಿದೇಶಿ ಕರೆನ್ಸಿ ನೋಟುಗಳು / ಟ್ರಾವೆಲ್ಲರ್ ಚೆಕ್ಕುಗಳು. (ನಿಬಂಧನೆಗಳು ಅನ್ವಯ).

    • bulletಖಾತೆದಾರರ ಇತರೆ ಆರ್.ಎಫ್.ಸಿ ಖಾತೆಗಳಿಂದ ವರ್ಗಾವಣೆ

    • bulletಅರ್ಹ ವ್ಯಕ್ತಿಯು ಭಾರತಕ್ಕೆ ಬರುವಾಗ ಅವರ ಎನ್.ಆರ್.ಇ / ಎಫ್.ಸಿ.ಎನ್.ಆರ್ (ಬಿ) ಖಾತೆಯಲ್ಲಿನ ಬಾಕಿ.

    • bulletಎ.ಡಿ. ಬ್ಯಾಂಕ್ ಅನುಮತಿಸಿದ ಮತ್ತು ವಿನಿಮಯ ನಿಯಂತ್ರಣ ನಿಯಮಗಳ ಪ್ರಕಾರ ಅವಧಿ ಮೀರದಂತೆ ಖರ್ಚು ಮಾಡದೆ ಉಳಿಸಿದ ವಿದೇಶಿ ವಿನಿಮಯ.


  • ಅನುಮತಿ ಇರುವ ಜಮೆಗಳು

    • bulletಆರ್.ಎಫ್.ಸಿ ಖಾತೆದಾರರು ಖಾತೆಯ ಹಣವನ್ನು ಭಾರತದಿಂದ ಹೊರದೇಶಗಳಿಗೆ, ಸಾಮಾನ್ಯ ಬ್ಯಾಂಕಿಂಗ್ ಚಾನೆಲ್ ಮೂಲಕ ವಿದೇಶದಲ್ಲಿ ಹೂಡಿಕೆ, ಅಥವಾ / ಮತ್ತು ಆ ಹೂಡಿಕೆಯ ಮುಂದಿನ ಪಾವತಿಗಳು ಆರ್.ಎಫ್.ಸಿ ಖಾತೆಯಿಂದ ಆಗಬೇಕಾಗಿದ್ದಲ್ಲಿ ಅಂತಹ ಯಾವುದೇ ನಂಬಲರ್ಹ ರವಾನೆಗಳಿಗೆ ಸ್ವತಂತ್ರವಾಗಿ ಬಳಸಿಕೊಳ್ಳಬಹುದು.

    • bulletಹೊರದೇಶಗಳಿಗೆ ಹಣ ರವಾನೆಯನ್ನು ಹೊರತುಪಡಿಸಿ, ಈ ಖಾತೆಗಳಿಂದ ಹಣ ಹಿಂಪಡೆತ / ಹಣ ಪಾವತಿ ಅಥವಾ ರಿಸರ್ವ್ ಬ್ಯಾಂಕಿನಿಂದ ಅಂಗೀಕೃತ ವಿದೇಶಿ ಕರೆನ್ಸಿಯಲ್ಲಿ ಪಾವತಿ ಮಾಡಬೇಕಾದಲ್ಲಿ, ಅದರ ಸಮಬೆಲೆಯುಳ್ಳ ಭಾರತೀಯ ರೂಪಾಯಿಯಲ್ಲಿ ಟಿಟಿ ಖರೀದಿಯ ದರದಲ್ಲಿ ಮಾತ್ರ ಅನುಮತಿಸಲಾಗುವುದು.

    • bullet ಇಲ್ಲಿ ಕ್ಲಿಕ್ ಮಾಡಿಆರ್.ಎಫ್.ಸಿ ಖಾತೆ ತೆರೆಯುವ ನಮೂನೆಗಾಗಿ

    • bullet ಇಲ್ಲಿ ಕ್ಲಿಕ್ ಮಾಡಿಆರ್.ಎಫ್.ಸಿ (ಟಿಡಿ) ಯ ಬಡ್ಡಿ ದರಗಳಿಗಾಗಿ

  • ಭಾರತೀಯ ನಿವಾಸಿ ವಿದೇಶಿ ಕರೆನ್ಸಿ ಯೋಜನೆ

    ಭಾರತೀಯ ನಿವಾಸಿಯಾದ ಒಬ್ಬ ವ್ಯಕ್ತಿ ನಮ್ಮ ಅಧಿಕೃತ ಶಾಖೆಗಳಲ್ಲಿ, ಈ ಕೆಳಗೆ ಕೊಟ್ಟ ಮೂಲಗಳಿಂದ ಆತ/ಆಕೆ ಗಳಿಸಿದ ವಿದೇಶಿ ಕರೆನ್ಸಿ ನೋಟು, ಬ್ಯಾಂಕ್ ನೋಟು, ಟ್ರಾವೆಲ್ಲರ್ ಚೆಕ್ ಬಳಸಿ ಆರ್.ಎಫ್.ಸಿ (ದೇಶೀ) ಖಾತೆ ತೆರೆದು ನಿರ್ವಹಿಸಬಹುದು.

    • bulletಭಾರತದಿಂದ ಹೊರದೇಶಕ್ಕೆ ಭೇಟಿ ನೀಡಿದಾಗ ಅಲ್ಲಿ ಇವರ ಸೇವೆಗೆ ಪಾವತಿ ಮಾಡಿದ, ಆದರೆ, ಭಾರತದಲ್ಲಿ ಮಾಡಿದ ಯಾವುದೇ ವ್ಯವಹಾರ ಅಥವಾ ಬೇರೆ ಯಾವುದೇ ಕೆಲಸಗಳಿಗಾಗಿ ಅಲ್ಲದ ಹಣ; ಅಥವಾ

    • bulletಭಾರತೀಯ ನಿವಾಸಿಯಲ್ಲದ ವ್ಯಕ್ತಿ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಸಲ್ಲಿಸಿದ ಗೌರವಧನ, ಕಾಣಿಕೆ ಅಥವಾ ನೀಡಿದ ಸೇವೆಗೆ ಅಥವಾ ಬೇರೆ ಯಾವುದೇ ಕಾನೂನು ಬದ್ಧ ಸೇವೆಗೆ ಪ್ರತಿಯಾಗಿ ನೀಡಿದ ಹಣ; ಅಥವಾ

    • bulletಹೊರದೇಶಕ್ಕೆ ಭೇಟಿ ನೀಡಿದ ಸಮಯದಲ್ಲಿ ಗಳಿಸಿದ ಗೌರವಧನ ಅಥವಾ ಕಾಣಿಕೆ ಹಣ; ಅಥವಾ

    • bulletವಿದೇಶಿ ಪ್ರವಾಸಕ್ಕೆ ಹೋದಾಗ ಅಂಗೀಕೃತ ವ್ಯಕ್ತಿಯಿಂದ ಪಡೆದ ಆದರೆ ಖರ್ಚಾಗದೇ ಉಳಿದ ವಿದೇಶಿ ವಿನಿಮಯ.

    • bulletಯುಎಸ್‌ಡಿ, ಜಿಬಿಪಿ, ಇಯುಆರ್, ಸಿಎಡಿ ಮತ್ತು ಎಯುಡಿ ಗಳಿಂದ ಭಾರತೀಯ ನಿವಾಸಿ ವಿದೇಶಿ ಕರೆನ್ಸಿ ಖಾತೆಯನ್ನು ತೆರೆಯಬಹುದು.

    • bulletಖಾತೆಯಲ್ಲಿ ಇರಿಸಲಾಗುವ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ.

    • bulletಚೆಕ್ ಬುಕ್ ಸೌಲಭ್ಯ ಒದಗಿಸಲಾಗುವುದು.

    • bulletಆರ್.ಎಫ್.ಸಿ (ದೇಶೀ) ಠೇವಣಿಯನ್ನು ಒಂದು ಅಧಿಕೃತ ಶಾಖೆಯಿಂದ ಇನ್ನೊಂದು ಅಧಿಕೃತ ಶಾಖೆಗೆ ವರ್ಗಾಯಿಸಬಹುದು.

    • bulletಆರ್.ಎಫ್.ಸಿ (ದೇಶೀ) ಖಾತೆಯ ಹಣ ನಿರ್ವಹಣೆ / ಹಿಂಪಡೆತ ಗಳನ್ನು ಮಾಡಲು ಆರ್.ಬಿ.ಐ.ನ ಮಾರ್ಗದರ್ಶಿಯ ನಿಯಮಗಳು ಅನ್ವಯ. ಪ್ರಸ್ತುತದಲ್ಲಿ, ಆರ್.ಎಫ್.ಸಿ ಖಾತೆಗೆ ಜಮಾ ಮಾಡಿದ ಹಣವನ್ನು ಖಾತೆದಾರರು ಮುಂದಿನ ತಿಂಗಳ ಕೊನೆಯೊಳಗೆ ಉಪಯೋಗಿಸಬೇಕು.

    • bulletಪ್ರಸ್ತುತ ವಿದೇಶಿ ವಿನಿಮಯ ನಿಯಮಗಳ ಪ್ರಕಾರ ಚಾಲ್ತಿ / ಕ್ಯಾಪಿಟಲ್ ಖಾತೆಯ ವ್ಯವಹಾರಗಳಿಗೆ ಮಾತ್ರ ಖಾತೆಯಿಂದ ಖರ್ಚು ಮಾಡಬಹುದು.

    • bullet ಆರ್.ಎಫ್.ಸಿ (ದೇಶೀ) ಖಾತೆಗೆ ಯಾವುದೇ ಬಡ್ಡಿ ನೀಡಲಾಗುವುದಿಲ್ಲ.


ಭಾರತೀಯ ನಿವಾಸಿ ವಿದೇಶಿ ಶಿ ಯೋಜನೆಯ ಹೆಚ್ಚುವರಿ ಯೋಜನೆ ಇದಾಗಿದೆ. ಮೊದಲು ಎನ್.ಆರ್.ಐ ಆಗಿದ್ದು ವಿದೇಶಗಳಲ್ಲಿ ಕೆಲಸ ಮಾಡಿ ಭಾರತಕ್ಕೆ ಮರಳಿದವರಿಗಾಗಿ ಬ್ಯಾಂಕ್ ಈ ಯೋಜನೆಯನ್ನು ನಿರ್ವಹಿಸುತ್ತಿದೆ.
longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು