Syndicate Bank
banner

 

ಸಿಂಡಿಕೇಟ್ ಬ್ಯಾಂಕ್ ಆನ್‍ಲೈನ್ ಶಾಪಿಂಗ್ ಹಾಗೂ ದಿನ ಬಳಕೆ ಬಿಲ್ ಪಾವತಿ

16.01.2018 ರಂದು ನವೀಕರಿಸಲಾಗಿದೆ

ನಿಮ್ಮನ್ನು ಮೂರನೆಯ ಪಕ್ಷದ ಜಾಲತಾಣಕ್ಕೆ ಮರುನಿರ್ದೇಶಿಸಲಾಗುತ್ತದೆ

ಈ ಅಂತರ್ಜಾಲ ತಾಣದಲ್ಲಿನ ಮಾಹಿತಿಹಾಗೂ ಶಿಫಾರಸುಗಳನ್ನು ನಂಬುಗೆಯ ಆಧಾರದ ಮೇಲೆ ಒದಗಿಸಲಾಗಿದೆ, ಹಾಗೂ ಇವು ಸರಿಯಾಗಿವೆ ಎಂದು ನಂಬಲಾಗಿದೆಯಾದರೂ, ಸಿಂಡಿಕೇಟ್ ಬ್ಯಾಂಕ್ ಮಾಹಿತಿಯನ್ನು ಪ್ರತಿನಿಧಿಸುವುದಿಲ್ಲ, ಅಥವಾ ಸಂಪೂರ್ಣತೆ, ಸಮರ್ಪಕತೆ ಅಥವಾ ನಿಖರತೆಗೆ ಯಾವುದೇ ಖಾತರಿಗಳನ್ನು ನೀಡುವುದಿಲ್ಲ.ಅದೇ ರೀತಿ ಒದಗಿಸಲಾದ ಮಾಹಿತಿಯ ಬಳಕೆ ಅದನ್ನು ಸ್ವೀಕರಿಸುವ ವ್ಯಕ್ತಿಗಳ ವಿವೇಚನೆಗೆ ಬಿಟ್ಟದ್ದು ಮತ್ತು ಅದರ ಬಳಕೆಗೆ ಮುಂಚಿತವಾಗಿ ಸ್ವಂತ ನಿರ್ಣಯವನ್ನು ಮಾಡುತ್ತಾರೆ ಎಂಬ ನಂಬುಗೆಯ ಮೇಲೆ ಈ ಮಾಹಿತಿಯನ್ನು ಒದಗಿಸಲಾಗಿದೆ. ಈ ಸೈಟುಗಳಲ್ಲಿ ನೀಡಿರುವ ಮಾಹಿತಿಯನ್ನು ಬಳಸುವುದರಿಂದ, ನಂಬುವುದರಿಂದ ಹಾಗೂ ಅದರಲ್ಲಿ ಉಲ್ಲೇಖಿಸಿರುವ ಉತ್ಪನ್ನಗಳ ಬಳಕೆಯಿಂದ ಉಂಟಾದ ಹಾನಿಗಳಿಗೆ ಯಾವುದೇ ಕಾರಣಕ್ಕೂ ಸಿಂಡಿಕೇಟ್ ಬ್ಯಾಂಕ್ಹೊಣೆಯಾಗುವುದಿಲ್ಲ.

ಜಾಲತಾಣದಲ್ಲಿ ನೀಡಿದ ಕೊಂಡಿಗಳ ಸೈಟುಗಳು ಸಿಂಡಿಕೇಟ್ ಬ್ಯಾಂಕಿನ ನಿಯಂತ್ರಣದಲ್ಲಿರುವುದಿಲ್ಲ ಹಾಗೂ ಕೊಂಡಿಯ ಸೈಟುಗಳಲ್ಲಿನ ವಿಷಯಕ್ಕೆ ಅಥವಾ ಅದರ ಮುಂದಿನ ಕೊಂಡಿಗಳಿಗೆ ಅಥವಾ ಅದರಲ್ಲಿ ಮಾಡಲಾದ ಬದಲಾವಣೆಗಳಿಗೆ ಹಾಗೂ ನವೀಕರಣಗಳಿಗೆ ಸಿಂಡಿಕೇಟ್ ಬ್ಯಾಂಕ್ ಹೊಣೆಯಾಗುವುದಿಲ್ಲ. ಸಿಂಡಿಕೇಟ್ ಬ್ಯಾಂಕ್ ಈ ಕೊಂಡಿಗಳನ್ನು ಕೇವಲ ನಿಮ್ಮ ಅನುಕೂಲಕ್ಕಾಗಿ ಒದಗಿಸುತ್ತಿದೆ ಹಾಗೂ ಯಾವುದೇ ಕೊಂಡಿಯನ್ನು ಸೇರ್ಪಡೆ ಮಾಡುವುದು ಅಥವಾ ಆ ಸೈಟಿನಲ್ಲಿ ಲಭ್ಯವಿರುವ ಯಾವುದೇ ಮಾಹಿತಿಗೆ ಸಿಂಡಿಕೇಟ್ ಬ್ಯಾಂಕಿನ ಸಮ್ಮತಿಯನ್ನು ಸೂಚಿಸುವುದಿಲ್ಲ .

ಸಿಂಡಿಕೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಬ್ಯಾಂಕಿನೊಂದಿಗೆ ಅವರ ಖಾತೆಯ ನೇರ ಡೆಬಿಟ್ ಮೂಲಕ ಖರೀದಿ ಮತ್ತು ಪಾವತಿಗಳನ್ನು ಈ ಜಾಲತಾಣಗಳಲ್ಲಿ ಮಾಡಲು ಸಾಧ್ಯವಾಗಿಸಲು ಮಾತ್ರ ಈ ಕೊಂಡಿಗಳನ್ನು ನೀಡುತ್ತದೆ. ಗ್ರಾಹಕರು ಇದರಲ್ಲಿರುವ ಅಪಾಯದ ಅರಿವು ಹಾಗೂ ಜವಾಬ್ದಾರಿಯಿಂದ ವ್ಯವಹರಿಸುತ್ತಾರೆ. ಇದರಲ್ಲಿ ಭಾಗವಹಿಸುವ ವ್ಯಾಪಾರಿ ಸಂಸ್ಥೆಗಳಿಂದ ಒದಗಿಸಲಾದ ಶೀರ್ಷಿಕೆ, ಪ್ರಕಾರ, ಗುಣಮಟ್ಟ, ಪ್ರಮಾಣ, ಬಳಕೆದಾರ, ಸೂಕ್ತತೆ, ವ್ಯಾಪಾರೀಕರಣ, ಸರಕುಗಳ ಮತ್ತು / ಅಥವಾ ಸೇವೆಗಳ ವಿತರಣೆಯಲ್ಲಿ ವಿಳಂಬ, ವಿತರಣೆಯಾಗದಿರುವುದಕ್ಕೆ, ಯಾವುದೇ ಖಾತರಿ ಹಾಗೂ ಪ್ರಾತಿನಿಧ್ಯ ಅಥವಾ ಖಾತರಿ, ಪ್ರಾತಿನಿಧ್ಯಗಳಂತೆ ಕಾಣುವ ನಕಲೀ ಖಾತರಿ, ಪ್ರಾತಿನಿಧ್ಯಗಳನ್ನು ಒಳಗೊಂಡಂತೆಯಾವುದೇ ರೀತಿಯ ಯಾವುದೇ ಪ್ರಾತಿನಿಧ್ಯಗಳನ್ನು ಅಥವಾ ಖಾತರಿಗಳನ್ನು ಸಿಂಡಿಕೇಟ್ ಬ್ಯಾಂಕ್ ಮಾಡುವುದಿಲ್ಲ ಹಾಗೂ ಈ ರೀತಿ ಆದಲ್ಲಿ ಸಿಂಡಿಕೇಟ್ ಬ್ಯಾಂಕ್ ಹೊಣೆಯಲ್ಲ.ಸರಕುಗಳು ಅಥವಾ ಸೇವೆಗಳು ಖಾತರಿಯ ಮಾಹಿತಿಯೊಂದಿಗೆ ಬರಬಹುದು, ಹಾಗೂ ಯಾವುದೇ ಹಕ್ಕು ಪ್ರತಿಪಾದನೆ / ಕ್ರಮವನ್ನು ತಯಾರಕರು / ವ್ಯಾಪಾರ ಮಾಡಿದವರು / ಸೇವೆ ಒದಗಿಸುವವರನ್ನು ಕುರಿತಾಗಿರಬೇಕು. ಸಿಂಡಿಕೇಟ್ ಬ್ಯಾಂಕಿನ ಪಾತ್ರವು ಕೇವಲ ಸುಗಮಗಾರಿಕೆ ಮಾಡುವುದಾಗಿದೆಯೇ ಹೊರತು ಸೇವೆಯನ್ನು ಒದಗಿಸುವುದಲ್ಲ ಎಂದು ದಯವಿಟ್ಟು ಗಮನಿಸಿ.

 
click here to accept   click here to reject
 
longbanner rect1 rect2 rect3 rect4

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು