Syndicate Bank
banner
 

ಅನಿವಾಸಿ ಭಾರತೀಯ ಸಾಮಾನ್ಯ ರೂಪಾಯಿ ಖಾತೆಗಳು (ಎನ್.ಆರ್.ಒ. ಖಾತೆಗಳು)

 
bullet  
ಅನಿವಾಸಿ ಭಾರತೀಯ (ಬಾಹ್ಯ) ಖಾತೆ ಯೋಜನೆಯಂತಹ ವಿಶೇಷ ಯೋಜನೆಯ ಅಡಿಯಲ್ಲಿ ತೆರೆದ ಖಾತೆಗಳನ್ನು ಹೊರತು ಪಡಿಸಿ, ಹೊರದೇಶಗಳ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಕಂಪನಿಗಳು ತೆರೆದ ಖಾತೆಗಳನ್ನು ಅನಿವಾಸಿ ಭಾರತೀಯ (ಸಾಮಾನ್ಯ) ಖಾತೆ (ಎನ್.ಆರ್.ಒ ಖಾತೆ) ಎಂದು ಕರೆಯುತ್ತಾರೆ. ಆದರೂ, ನಿರ್ಧಿಷ್ಟವಾಗಿ ಉಲ್ಲೇಖಿಸದಿದ್ದಲ್ಲಿ ಈ ಸೂಚನೆಗಳು ವಿದೇಶಿ ಖಾತೆಗಳನ್ನು ಒಳಗೊಳ್ಳುವುದಿಲ್ಲ.

bullet  
ಭಾರತದ ಹೊರಗಿನ ಯಾವುದೇ ದೇಶದಲ್ಲಿರುವ (ನೇಪಾಳ ಮತ್ತು ಭೂತಾನ ದೇಶದ ನಿವಾಸಿಗಳನ್ನು ಹೊರತುಪಡಿಸಿ) ಈ ಕೆಳಗಿನ ನಿಬಂಧನೆಗಳನ್ನು ಪೂರೈಸುವ ವ್ಯಕ್ತಿಗಳು ಎನ್.ಆರ್.ಓ ಖಾತೆ ತೆರೆಯಲು ಅರ್ಹರಿರುತ್ತಾರೆ.

bullet  
ಪಾಕಿಸ್ತಾನದ ಪೌರತ್ವ / ಮಾಲೀಕತ್ವ ಹೊಂದಿರುವ ವ್ಯಕ್ತಿಗಳು / ಘಟಕಗಳು ಖಾತೆ ತೆರೆಯಲು ಆರ್.ಬಿ.ಐ ನ ಪೂರ್ವಪರವಾನಗಿ ಅಗತ್ಯ.

bullet  
ವಿದೇಶಿ ನೋಂದಣಿ ಕಚೇರಿ ನೀಡಿದ ಅಧಿಕೃತ ವೀಸಾ ಮತ್ತು ನಿವಾಸಿ ಪರವಾನಗಿ ಹೊಂದಿರುವ ಬಾಂಗ್ಲಾದೇಶೀ ವ್ಯಕ್ತಿಗಳ ಖಾತೆಗಳನ್ನು ಅಧಿಕಾರವಿರುವ ಡೀಲರ್ ಬ್ಯಾಂಕುಗಳು ತೆರೆಯಬಹುದು. ಆದರೂ ಬಾಂಗ್ಲಾದೇಶದ ಒಡೆತನವಿರುವ ಘಟಕಗಳು ಖಾತೆ ತೆರೆಯಲು ಆರ್.ಬಿ.ಐ ನ ಪೂರ್ವಪರವಾನಗಿ ಅಗತ್ಯ

bullet  
ಖಾತೆಯನ್ನು ಖಾತೆದಾರರೇ ತೆರೆಯಬೇಕು. ಪವರ್ ಆಫ್ ಅಟಾರ್ನಿ ಹೊಂದಿದವರು ಖಾತೆ ತೆರೆಯಲು ಅನುಮತಿ ಇಲ್ಲ.

bullet  
ಅಧಿಕಾರ ಹೊಂದಿದ ಡೀಲರುಗಳು ನೇಪಾಳ / ಭೂತಾನ ದೇಶದ ನಿವಾಸಿಗಾಗಿ ದೇಶೀ ರೂಪಾಯಿ ಖಾತೆಯನ್ನು ತೆರೆದು ನಿರ್ವಹಿಸಬಹುದು.

bullet  
ಒಬ್ಬ ವ್ಯಕ್ತಿ ಭಾರತದಿಂದ ನೇಪಾಳ ಅಥವಾ ಭೂತಾನಕ್ಕೆ ಉದ್ಯೋಗದ ಮೇಲೆ ಅಥವಾ ವಹಿವಾಟು ನಡೆಸಲು ಅಥವಾ ಇತರ ಯಾವುದೇ ಕಾರಣಕ್ಕಾಗಿ ಅನಿಯಮಿತ ಅವಧಿಗೆ ನೆಲೆಸಲು ಹೋದಲ್ಲಿ, ಆ ವ್ಯಕ್ತಿಯ ಪ್ರಸ್ತುತ ಖಾತೆಯನ್ನು ಭಾರತೀಯ ನಿವಾಸಿ ಖಾತೆ ಎಂದೇ ಮುಂದುವರಿಯುತ್ತವೆ. ಈ ರೀತಿಯ ಖಾತೆಗಳನ್ನು ಅನಿವಾಸಿ ಭಾರತೀಯ (ಸಾಮಾನ್ಯ) ರೂಪಾಯಿ ಖಾತೆ (ಎನ್.ಆರ್.ಒ) ಎಂದು ಪರಿಗಣಿಸಲಾಗುವುದಿಲ್ಲ.

bullet  
ಭಾರತೀಯ ನಿವಾಸಿಗಳೊಟ್ಟಿಗೆ ಜoಟಿ ಖಾತೆಯನ್ನು ಹೊಂದಬಹುದು.

bullet  
ಖಾತೆಗಳು ಉಳಿತಾಯ ಅಥವಾ ಚಾಲ್ತಿ ಅಥವಾ ಸ್ಥಿರ ಕಾಲಾವಧಿ ಠೇವಣಿ ಅಥವಾ ಸಂಚಿತ ಠೇವಣಿಯ ಸ್ವರೂಪದ ಭಾರತೀಯ ರೂಪಾಯಿ ಖಾತೆಗಳಾಗಿರುತ್ತವೆ.

bullet  
ಸ್ಥಿರ ಕಾಲಾವಧಿ ಠೇವಣಿಯ ಅವಧಿಯು ನಿವಾಸಿ ಖಾತೆಗಳಿಗೆ ಅನ್ವಯಿಸುವಂತೆಯೇ ಇರುತ್ತವೆ.

bullet  
ಬಡ್ಡಿ ದರಗಳು ಆರ್.ಬಿ.ಐ.ನಿಂದ ಕಾಲಕಾಲಕ್ಕೆ ಒದಗಿಸಲ್ಪಟ್ಟ ನಿರ್ದೇಶನ / ಸೂಚನೆಗಳಂತೆ ಇರುತ್ತವೆ. ಚಾಲ್ತಿ ಖಾತೆಗಳಿಗೆ ಯಾವುದೇ ಬಡ್ಡಿ ಇರುವುದಿಲ್ಲ. ಉಳಿತಾಯ, ಸಂಚಿತ ಮತ್ತು ಸ್ಥಿರ ಕಾಲಾವಧಿ ಠೇವಣಿಗಳಿಗೆ ಬಡ್ಡಿ ದರವನ್ನು ನಿಗದಿ ಪಡಿಸಲು ಬ್ಯಾಂಕುಗಳು ಸ್ವತಂತ್ರವಾಗಿರುತ್ತವೆ. ಆದರೂ, ಇದು ದೇಶೀ ರೂಪಾಯಿ ಠೇವಣಿಯ ಬಡ್ಡಿದರಗಿಂತ ಅಧಿಕವಾಗಿರುವುದಿಲ್ಲ.

bullet  
ಈ ಕೆಳಗೆ ಉಲ್ಲೇಖಿಸಿದ ಪ್ರಕರಣಗಳನ್ನು ಹೊರತುಪಡಿಸಿ ಎನ್.ಆರ್.ಒ ಖಾತೆಗಳ ಬಾಕಿಯನ್ನು ಆರ್.ಬಿ.ಐ ನ ಅನುಮತಿ ಇಲ್ಲದೆ ಭಾರತದಿಂದ ಹೊರಗೆ ರವಾನೆ ಮಾಡುವಂತಿಲ್ಲ.
  1. bulletಭಾರತದಲ್ಲಿ ಖಾತೆದಾರನ ಪ್ರಸ್ತುತ ಆದಾಯ (ಬಾಡಿಗೆ, ಲಾಭಾಂಶ, ಎನ್.ಆರ್.ಐ / ಪಿ.ಐ.ಓ ಗಳು ಗಳಿಸಿದ ಬಡ್ಡಿ) ಅನ್ವಯವಾಗುವ ತೆರಿಗೆಗೆ ನಿವ್ವಳವಾಗಿದ್ದಲ್ಲಿ.
  2. bulletಕೆಲವು ನಿರ್ದಿಷ್ಟ ನಿಯಮಗಳನ್ವಯ ಸ್ವಯಾರ್ಜಿತ / ಪಿತ್ರಾರ್ಜಿತ ನ್ಯಾಯಯುತವಾಗಿ ಪರಂಪರೆಯಿಂದ ಲಭಿಸಿದ ಸ್ಥಿರ ಹಾಗೂ ಚರ /ಆರ್ಥಿಕ ಸ್ವತ್ತುಗಳ ಮಾರಾಟದಿಂದ ಖಾತೆಯಲ್ಲಿ ಜಮಾ ಮಾಡಲಾಗಿರುವ ಮೊತ್ತದಿಂದ ವಾರ್ಷಿಕ (ಏಪ್ರಿಲ್ - ಮಾರ್ಚ್) ಒಂದು ಮಿಲಿಯನ್ ಯು.ಎಸ್.ಡಿ. ವರೆಗೆ

bullet  
ಭಾರತೀಯ ನಿವಾಸಿ ಅಥವಾ ಅನಿವಾಸಿ ಭಾರತೀಯನ ಪರವಾಗಿ ಅನಿವಾಸಿ ಭಾರತೀಯ (ವೈಯಕ್ತಿಕ) ಖಾತೆದಾರನು ನಾಮನಿರ್ದೇಶನ ಮಾಡಬಹುದು.

bullet  
ಪ್ರಸ್ತುತ ನಿರ್ದೇಶನಗಳಂತೆ ಎನ್.ಆರ್.ಓ ಖಾತೆಯು ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ.

bullet  
ಪವರ್ ಆಫ್ ಅಟಾರ್ನಿ ಪಡೆದ ವ್ಯಕ್ತಿಯ ಖಾತೆ ನಿರ್ವಹಣೆಯನ್ನು ಅನುಮತಿ ಪಡೆದ ಸ್ಥಳೀಯ ಪಾವತಿಗಳನ್ನು ರೂಪಾಯಿಗಳಲ್ಲಿ ಮಾಡಲು ಪ್ರಸ್ತುತ ಆದಾಯವನ್ನು ಭಾರತದ ಹೊರಗಿನ ಖಾತೆದಾರನ ಬ್ಯಾಂಕುಗಳಿಗೆ ವರ್ಗಾಯಿಸಲು, ಅಥವಾ ಸ್ವಯಂ ಖಾತೆದಾರನ ಖಾತೆಗೆ ಸಾಮಾನ್ಯ ಬ್ಯಾಂಕಿಂಗ್ ಚಾನೆಲ್ ಮೂಲಕ ರವಾನಿಸಲು ಸೀಮಿತಗೊಳಿಸಲಾಗಿದೆ.

bullet  
ಖಾತೆದಾರ/ರು ಮತ್ತು ಮೂರನೆಯ ಕಕ್ಷಿದಾರರಿಗೆ ಭಾರತೀಯ ರೂಪಾಯಿಗಳಲ್ಲಿ ಈ ಕೆಳಗಿನ ಉದ್ದೇಶಗಳಿಗೆ ಸಾಲ ಪಡೆಯಲು ಅನುಮತಿ ಇದೆ.
  1. bulletವೈಯಕ್ತಿಕ ಕಾರಣಗಳಿಗೆ ಅಥವಾ ವ್ಯಾಪಾರ / ವ್ಯವಹಾರ ನಡೆಸಲು
  2. bulletತನ್ನ ದೇಶಕ್ಕೆ ಮರಳಿ ತರಿಸಿಕೊಳ್ಳದ ನಿಬಂಧನೆಯ ಮೇಲೆ, ಭಾರತೀಯ ಘಟಕಗಳು / ಕಂಪನಿಗಳಲ್ಲಿ ಬಂಡವಾಳ ಹೂಡುವುದು.
  3. bulletತನ್ನ ಸ್ವಂತ ಉಪಯೋಗಕ್ಕಾಗಿ ಬಾರತದಲ್ಲಿ ಫ್ಲಾಟ್ / ಮನೆ ಖರೀದಿಸುವುದು. ಇದು ಎಫ್.ಇ.ಎಂ.ಎ 1999 ರ ಅಡಿಯ ಸಂಬಂಧಿ ನಿಯಂತ್ರಣಗಳಿಗೆ ಅಧೀನವಾಗಿರುತ್ತದೆ.
  4. bulletಮರುಸಾಲ ನೀಡಲು, ವ್ಯವಸಾಯಕ್ಕೆ / ತೋಟಗಾರಿಕೆಗೆ ಅಥವಾ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸಾಲ ಪಡೆಯಲಾಗುವುದಿಲ್ಲ.
  5. bulletಖಾತೆದಾರರಿಗೆ ಅಥವಾ ಮೂರನೆಯ ಕಕ್ಷಿದಾರರಿಗೆ ಭಾರತದಿಂದ ಹೊರಗೆ ಸಾಲ ಪಡೆಯಲು ಅನುಮತಿ ಇಲ್ಲ.
  6. bulletಖಾತೆದಾರರಿಗೆ ಅಥವಾ ಮೂರನೆಯ ಕಕ್ಷಿದಾರರಿಗೆ ಭಾರತದಲ್ಲಿ ವಿದೇಶಿ ಕರೆನ್ಸಿಯಲ್ಲಿ ಸಾಲ ಪಡೆಯಲು ಅನುಮತಿ ಇಲ್ಲ.

bullet  
ಇಲ್ಲಿ ಕ್ಲಿಕ್ ಮಾಡಿರಿ ಎನ್.ಆರ್.ಒ. ಖಾತೆತೆರೆಯುವ ನಮೂನೆಗಾಗಿ

bullet  
ಇಲ್ಲಿ ಕ್ಲಿಕ್ ಮಾಡಿರಿ ಎನ್.ಆರ್.ಒ. ಠೇವಣಿಯ ಬಡ್ಡಿ ದರಗಳಿಗಾಗಿ

 
longbanner rect1 rect2 rect3 rect4

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು