Syndicate Bank
banner
 

ಅನಿವಾಸಿ ಭಾರತೀಯ (ಬಾಹ್ಯ) ರೂಪಾಯಿ ಖಾತೆಗಳು (ಎನ್.ಆರ್.ಇ. ಖಾತೆಗಳು)

 
 
ಎನ್.ಆರ್.ಐ./ ಪಿ.ಐ.ಒ ಗಳಿಗೆ ಅನಿರೀಕ್ಷಿತ ಏರುಪೇರುಗಳನ್ನು ನೀಗಿಸಲು ಮಾಡುವ ಉಳಿತಾಯಕ್ಕಾಗಿ ಅಥವಾ ಸ್ಥಿರ ಕಾಲಾವಧಿ ಠೇವಣಿಯಲ್ಲಿ ಹೂಡಲು ಈ ಖಾತೆಗಳನ್ನು ವಿನ್ಯಾಸಗೊಳಿಸಲಾಗಿದೆ. ಉಳಿತಾಯ ಖಾತೆ, ಚಾಲ್ತಿ ಖಾತೆ, ಸಂಚಿತ ಠೇವಣಿ ಮತ್ತು ಸ್ಥಿರ ಕಾಲಾವಧಿ ಠೇವಣಿ (ನಗದು ಸರ್ಟಿಫಿಕೇಟ್ ಅಥವಾ ಸ್ಥಿರ ಠೇವಣಿ) ಹೀಗೆ ಯಾವುದೇ ರೀತಿಯ ಖಾತೆಯಾಗಿರಬಹುದು. ಹೂಡಿಕೆಯನ್ನು ಬಡ್ಡಿಯ ಸಹಿತ ತಮ್ಮ ದೇಶಕ್ಕೆ ಮರಳಿ ತರಿಸಿಕೊಳ್ಳಬಹುದು.

  ಖಾತೆ ತೆರೆಯುವ ನಮೂನೆಯನ್ನು (ನಮ್ಮ ಜಾಲತಾಣದಲ್ಲಿ ಲಭ್ಯವಿದೆ) ಸೂಕ್ತವಾಗಿ ತುಂಬಿ,2 ಪಾಸ್‌ಪೋರ್ಟ್ ಅಳತೆಯ ಫೋಟೋಗಳು ಮತ್ತು ವೀಸಾ ಸ್ಟ್ಯಾಂಪ್ ಇರುವ ಪಾಸ್‌ಪೋರ್ಟ್ (ಕೆವೈಸಿ ಉದ್ದೇಶಕ್ಕಾಗಿ) ಪ್ರತಿಯನ್ನು ಭಾರತೀಯ ರಾಯಭಾರ ಕಚೇರಿಯ ಧೃಡೀಕರಣದೊಂದಿಗೆ ವಿದೇಶೀ ಬ್ಯಾಂಕ್ ಮೂಲಕ ಹಣ ರವಾನೆ ಮಾಡಿ ಖಾತೆ ತೆರೆಯಬಹುದು.
 
ಕೇವಲ ವಿದೇಶೀ ಬ್ಯಾಂಕುಗಳ ಮೂಲಕ ರವಾನೆ, / ಟ್ರಾವೆಲ್ಲರ್ ಚೆಕ್ಕುಗಳು / ವಿದೇಶೀ ಕರೆನ್ಸಿ ಅಥವಾ ಎನ್.ಆರ್.ಇ ಕಾಲಾವಧಿ ಠೇವಣಿಯ ಆದಾಯ, ಎಫ್.ಸಿ.ಎನ್.ಆರ್. (ಬಿ) ಠೇವಣಿಯ ಆದಾಯ ಅಥವಾ ಈ ರೀತಿಯ ಎನ್.ಆರ್.ಇ. ಹಣ ಹೂಡಿಕೆಗಳ ಆದಾಯಗಳಿಂದ ಮಾತ್ರ ಠೇವಣಿ ಮಾಡಬಹುದು.

 
ಕೇವಲ ಸ್ಥಳೀಯ ಪಾವತಿ, ಎನ್.ಆರ್.ಇ / ಎಫ್.ಸಿ.ಎನ್.ಆರ್ (ಬಿ) ಖಾತೆಗಳಿಗೆ ಹಣ ವರ್ಗಾವಣೆ, ಹಾಗೂ ಇತರ ಆರ್.ಬಿ.ಐ. ಅನುಮತಿ ನೀಡಿದ ಹೂಡಿಕೆಗಳಿಗೆ ಮಾತ್ರ ಹಣ ಹಿಂಪಡೆತ ಸಾಧ್ಯ.

 
ಜoಟಿ ಖಾತೆಗಳಿಗೆ ಅನುಮತಿ ಇದೆ. ಎನ್.ಆರ್.ಐ ಗಳು ತಮ್ಮ ಭಾರತೀಯ ನಿವಾಸಿ,ನಿಕಟ, ಸಂಬಂಧಿಗಳೊಂದಿಗೆ (ಕಂಪನಿ ಕಾಯಿದೆ 1956 ರ ಸೆಕ್ಷನ್ 6 ರಲ್ಲಿ ಉಲ್ಲೇಖಿಸಿರುವ ವ್ಯಾಖ್ಯಾನದ ಪ್ರಕಾರ “ಸಂಬಂಧಿಗಳು”)ಜoಟಿ ಖಾತೆ ತೆರೆಯಬಹುದು. ಭಾರತೀಯ ನಿವಾಸಿ, ನಿಕಟ ಸಂಬಂಧಿಯು ಎನ್.ಆರ್.ಐ. / ಪಿ.ಐ.ಒ ಖಾತೆದಾರರ ಜೀವಿತಾವಧಿಯಲ್ಲಿ ಅವರ ಸೂಚನೆಯ ಮೇರೆಗೆ ಪವರ್ ಆಫ್ ಅಟಾರ್ನಿಯಾಗಿ ಖಾತೆ ನಿರ್ವಹಿಸಲು ಅರ್ಹರಾಗಿರಬೇಕು.

 
ಪವರ್ ಆಫ್ ಅಟಾರ್ನಿಯಾಗಿ ಕಾರ್ಯ ನಿರ್ವಹಿಸುವವರು ಸ್ಥಳೀಯ ಪಾವತಿಗಳನ್ನು ಮತ್ತು ಒಪ್ಪಿಗೆ ಪಡೆದ ಹೂಡಿಕೆಗಳಿಗೆ ಮಾತ್ರ ಖಾತೆಯನ್ನು ನಿರ್ವಹಿಸಬಹುದು.

 
ಸುಲಭವಾಗಿ ಗುರುತಿಸುವ ಸಲುವಾಗಿ ಎನ್.ಆರ್.ಐ. ಖಾತೆದಾರರಿಗೆ ವಿಶೇಷವಾದ ಸರಣಿಯ ಚೆಕ್ಕುಗಳನ್ನು ಬ್ಯಾಂಕ್ ನೀಡುತ್ತದೆ.

 
ಸಾಮಾನ್ಯವಾಗಿ ಸ್ಥಿರ ಕಾಲಾವಧಿ ಠೇವಣಿಯನ್ನು ಕನಿಷ್ಠ 1 ವರ್ಷ ಮತ್ತು ಗರಿಷ್ಟ 10 ವರ್ಷದ ಅವಧಿಗೆ ಮಾಡಬಹುದು.

 
ವೈಯಕ್ತಿಕ / ವ್ಯವಹಾರದ ಕಾರಣಗಳಿಗೆ ಸ್ಥಿರ ಕಾಲಾವಧಿ ಠೇವಣಿಯ ಮೇಲೆ ಸಾಲ ಪಡೆಯಬಹುದು. ಆದರೂ, ಮರುಸಾಲ ನೀಡಲು, ವ್ಯವಸಾಯಕ್ಕೆ / ತೋಟಗಾರಿಕೆಗೆ ಅಥವಾ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸ್ಥಿರ ಕಾಲಾವಧಿ ಠೇವಣಿಯ ಮೇಲೆ ಸಾಲ ಪಡೆಯಲಾಗುವುದಿಲ್ಲ. ಸಾಲಗಳಿಗೆ ಬ್ಯಾಂಕಿನಿಂದ ಕಾಲಕಾಲಕ್ಕೆ ನಿಗದಿತವಾದ ಬಡ್ಡಿದರ ಅನ್ವಯಿಸುತ್ತದೆ.

 
ಭಾರತೀಯ ನಿವಾಸಿ ವಿದೇಶಿ ಕರೆನ್ಸಿ (ಆರ್.ಎಫ್.ಸಿ) ಠೇವಣಿಯಾಗಿ ಪರಿವರ್ತಿಸಲು ಎನ್.ಆರ್.ಇ. ಸ್ಥಿರ ಕಾಲಾವಧಿ ಠೇವಣಿಯನ್ನು ಅವಧಿಪೂರ್ವ ಮುಚ್ಚಿದಲ್ಲಿ ಅದಕ್ಕೆ ಯಾವುದೇ ದಂಡ ವಿಧಿಸಲಾಗುವುದಿಲ್ಲ.

 
ಎನ್.ಆರ್.ಇ. ಸ್ಥಿರ ಕಾಲಾವಧಿ ಠೇವಣಿಯನ್ನು ಎಫ್.ಸಿ.ಎನ್.ಆರ್  (ಬಿ) ಠೇವಣಿಯಾಗಿ ಪರಿವರ್ತಿಸಲು ಅವಧಿಪೂರ್ವ ಹಿಂಪಡೆದರೆ ದಂಡನೆಯ ನಿಯಮಗಳಿಗೆ ಒಳಪಡುತ್ತದೆ.

 
ನಾಮನಿರ್ದೇಶನದ ಸೌಲಭ್ಯಇದೆ.

 
ಎನ್.ಆರ್.ಇ. ಖಾತೆ ತೆರೆಯುವ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ
 
ಎನ್.ಆರ್.ಇ. ಠೇವಣಿಯ ಬಡ್ಡಿ ದರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

longbanner rect1 rect2 rect3 rect4

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು