Syndicate Bank
banner
 

ಬ್ಯಾಂಕ್ ಒದಗಿಸುತ್ತಿರುವ ಕಾಲಾವಧಿ ಗುಂಪು ಜೀವ ವಿಮಾ ರಕ್ಷಣೆ

 
ಈ ಕೆಳಗಿನವುಗಳಿಗೆ ಸಿಂಡಿಕೇಟ್ ಬ್ಯಾಂಕ್ ಮಾಸ್ಟರ್ ಪಾಲಿಸಿ ಹೋಲ್ಡರ್ ಆಗಿದೆ : ವಿಮಾ ಉತ್ಪನ್ನಗಳಲ್ಲಿನ ಪಾಲ್ಗೊಳ್ಳುವಿಕೆಯು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ವಿಮೆಯು ಒಂದು ವಿಜ್ಞಾಪನೆಯ ವಿಷಯವಾಗಿದೆ.
 

ಸಿಂಡ್ ಸುರಕ್ಷಾ

ಸಿಂಡ್ ಸುರಕ್ಷಾ ಯೋಜನೆಯು ನಮ್ಮಲ್ಲಿ ಉಳಿತಾಯ ಖಾತೆಯನ್ನು ಹೊಂದಿದವರಿಗೆ ಒದಗಿಸುವ ಗುಂಪು ಜೀವ ವಿಮಾ ರಕ್ಷಣೆಯಾಗಿದೆ (ಐಚ್ಛಿಕ).

10.01.2015 ರಿಂದ, ಸಿಂಡ್ ಸುರಕ್ಷಾ ಅಡಿಯಲ್ಲಿ, ಎಸ್ ಬಿ ಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯನ್ನು ವಿಮೆಯನ್ನು ಒದಗಿಸಲು ಆಯ್ಕೆ ಮಾಡಲಾಗಿದೆ. ಎಸ್ ಬಿ ಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯ ಮಾಸ್ಟರ್ ಪಾಲಿಸಿ ಅಡಿಯಲ್ಲಿ 18 ರಿಂದ 64 ವರ್ಷ ವಯಸ್ಸಿನ ಗ್ರಾಹಕರು ರೂ. 1 ಲಕ್ಷದ ಗುಣಕದಲ್ಲಿ ರೂ.1 ಲಕ್ಷ ದಿಂದ ರೂ.5 ಲಕ್ಷ ಗಳ ವರೆಗಿನ ಮೊತ್ತದ ಆಶ್ವಾಸನೆಯ ಜೀವ ವಿಮೆ ತೆಗೆದುಕೊಳ್ಳಬಹುದು.

 

ಎಸ್‍ಬಿಐ ಗುಂಪು ಕಾಲಾವಧಿ ಜೀವ ವಿಮಾ ರಕ್ಷಣೆ ಯೋಜನೆ – ಆರ್‍ಐಎನ್‍ಎನ್ ರಕ್ಷಾ

ಶೈಕ್ಷಣಿಕ ಸಾಲ ರಕ್ಷಕ – ಶೈಕ್ಷಣಿಕ ಸಾಲ ಪಡೆದವರಿಗೆ ಎಸ್‍ಬಿಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮೂಲಕ ಒದಗಿಸಲಾಗುವ ಗುಂಪು ವಿಮಾ ರಕ್ಷಣೆ

ಇದು ಬ್ಯಾಂಕಿನಿಂದ ಶೈಕ್ಷಣಿಕ ಸಾಲ ಪಡೆದಿರುವವರಿಗೆ ಎಸ್ ಬಿ ಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ ತೆಗೆದುಕೊಳ್ಳಲಾದ ಗುಂಪು ವಿಮಾ ರಕ್ಷಣೆಯಾಗಿದೆ. ಮಾಸ್ಟರ್ ಪಾಲಿಸಿಯನ್ನು ನವೀಕರಿಸಲು ಅಥವಾ ನವೀಕರಿಸದೇ ಇರುವ ಅಥವಾ ಅದೇ ಅಥವಾ ಇತರ ಯಾವುದೇ ವಿಮಾ ಕಂಪನಿಯೊಂದಿಗೆ ನವೀಕರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ. ಆದರೂ, ಪಾಲಿಸಿ ನವೀಕರಣ ಮಾಡಿದರೂ ಅಥವಾ ಮಾಡದಿದ್ದರೂ ಮಾಸ್ಟರ್ ಪಾಲಿಸಿ ಅಡಿಯಲ್ಲಿ ನೋಂದಾಯಿತರಾದವರ ಹೊಣೆಯನ್ನು ಎಸ್‍ಬಿಐ – ಲೈಫ್ ತೆಗೆದುಕೊಳ್ಳುತ್ತದೆ.

ಎಸ್‍ಬಿಐ ಲೈಫ್ ನಿಂದ ಪಡೆದ ಮಾಸ್ಟರ್ ಪಾಲಿಸಿಯ ಮುಖ್ಯಾಂಶಗಳು ಹಾಗೂ ಮುಖ್ಯ ಲಕ್ಷಣಗಳು

 
ವಿಷಯ ವಿವರಗಳು
ಸೂಕ್ತತೆ ಬ್ಯಾಂಕಿನ ಶೈಕ್ಷಣಿಕ ಸಾಲ ಪಡೆಯುವವರ ಅಗತ್ಯಕ್ಕೆ ತಕ್ಕಂತೆ ಈ ಯೋಜನೆಯನ್ನು ರೂಪಿಸಲಾಗಿದೆ.
ವಿಮೆಯ ಕಂತು ಪಾವತಿಯ ಅವಧಿ ಪಾಲಿಸಿಯನ್ನು ತೆಗೆದುಕೊಳ್ಳುವ ಅವಧಿಯಲ್ಲಿ ಒಂದೇ ಕಂತು.
ವಯಸ್ಸಿನ ವ್ಯಾಪ್ತಿ ಪ್ರವೇಶದ ವಯಸ್ಸು – 16 ರಿಂದ 60. ವಿಮೆಯನ್ನು ಒದಗಿಸುವವರು ವಿಮೆ ಪಡೆದುಕೊಳ್ಳಲು ಮಿತಿಗೊಳಿಸಿದ ಗರಿಷ್ಠ ವಯಸ್ಸು – 70 ವರ್ಷ ವಯಸ್ಸು.
ಅಪಾಯದ ರಕ್ಷಣೆ ಸಾಲ ಮರುಪಾವತಿಯ ವೇಳಾಪಟ್ಟಿಯ ಪ್ರಕಾರ ಅಪಾಯದ ರಕ್ಷಣೆಯ ಕ್ಷೀಣಿಸುವ ವಿಧಾನ.
ವೈದ್ಯಕೀಯ ಪರೀಕ್ಷೆ ವೈದ್ಯಕೀಯವಲ್ಲದ ವೆಚ್ಚಗಳಿಗೆ ಆರ್ಥಿಕ ನೆರವನ್ನು ಒದಗಿಸಲು ಇರುವ ಮಿತಿ
ವಯಸ್ಸಿನ ವ್ಯಾಪ್ತಿಯ ಮಿತಿ
16 ರಿಂದ 45 ವರ್ಷ ವಯಸ್ಸು – ರೂ.15,00,೦೦೦
46 ರಿಂದ 55 ವರ್ಷ ವಯಸ್ಸು – ರೂ. 7,50,೦೦೦
56 ರಿಂದ 60 ವರ್ಷ ವಯಸ್ಸು – ರೂ.3,00,೦೦೦
ಯಾವುದಾದರೂ ವೈದ್ಯಕೀಯ ವೆಚ್ಚಗಳು ಇದ್ದಲ್ಲಿ ವಿಮೆ ಒದಗಿಸುವವರೇ ಭರಿಸುತ್ತಾರೆ.
ಪಾಲಿಸಿಯ ವಾಯಿದೆ ಮಾಸ್ಟರ್ ಪಾಲಿಸಿಯು ನವೀಕೃತವಾದರೂ ಅಥವಾ ಆಗದಿದ್ದರೂ ವಿಮಾ ಕಂಪನಿಯು ಒದಗಿಸಿದ ವಿಮಾ ರಕ್ಷಣೆಯ ಅವಧಿಯು ಶೈಕ್ಷಣಿಕ ಸಾಲದ ಅವಧಿ ತೀರುವವರೆಗೂ ಮುಂದುವರೆಯುತ್ತದೆ.
 
longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು