Syndicate Bank
banner
 

ವಿದೇಶಿ ಕರೆನ್ಸಿ ಅನಿವಾಸಿ ಭಾರತೀಯ ಖಾತೆಗಳು (ಎಫ್.ಸಿ,ಎನ್.ಆರ್ (ಬಿ) ಖಾತೆಗಳು)

 
  • ಎನ್.ಆರ್.ಐ / ಪಿ.ಐ.ಒ ಗಳು ವಿದೇಶಿ ಹಣ ರವಾನೆಯಿಂದ ಅಥವಾ ಎನ್.ಆರ್.ಇ ಖಾತೆಯ ಆದಾಯದಿಂದ ಈ ಖಾತೆ ತೆರೆಯಬಹುದು.

  • ಹೆಸರಿಸಲ್ಪಟ್ಟ ಕರೆನ್ಸಿಗಳು : ಯುಎಸ್ ಡಾಲರ್ (ಯುಎಸ್‌ಡಿ), ಗ್ರೇಟ್ ಬ್ರಿಟನ್ ಪೌಂಡ್ಸ್ (ಜಿಬಿಪಿ), ಯೂರೋ, ಕೆನೆಡಿಯನ್ ಡಾಲರ್ (ಸಿಎಡಿ)ಮತ್ತು ಆಸ್ಟ್ರೇಲಿಯನ್ ಡಾಲರ್ (ಎಯುಡಿ). ಈ ಠೇವಣಿಗಳು ಸ್ಥಿರ ಕಾಲಾವಧಿ ಠೇವಣಿಗಳ ಸ್ವರೂಪದಲ್ಲಿರುತ್ತವೆ. (ಸ್ಥಿರ ಅಥವಾ ಮರುಹೂಡಿಕೆ)

  • ಯುಎಸ್‌ಡಿ, ಜಿಬಿಪಿ, ಯೂರೋ, ಸಿಎಡಿಮತ್ತು ಎಯುಡಿ ಗಳಲ್ಲಿ ಎಫ್.ಸಿ.ಎನ್.ಆರ್ (ಬಿ) ಖಾತೆಗೆ 1 ರಿಂದ 5 ವರ್ಷದ ಅವಧಿಗೆ ಠೇವಣಿ ಸ್ವೀಕರಿಸಲಾಗುವುದು. ಚಕ್ರಬಡ್ಡಿಯ ಲಾಭ ಪಡೆಯಲು ಠೇವಣಿಯನ್ನು ಕನಿಷ್ಠ ಒಂದು ವರ್ಷ ಮತ್ತು ಒಂದು ದಿನದ ಅವಧಿಗೆ ಇಡಬೇಕು. ಎಫ್.ಸಿ.ಎನ್.ಆರ್. (ಬಿ) ಖಾತೆಯಲ್ಲಿ ಸ್ವೀಕರಿಸಲಾಗುವ ಕನಿಷ್ಠ ಠೇವಣಿ ಯುಎಸ್‌ಡಿ 1000, ಜಿಬಿಪಿ 500, ಯೂರೋ 1000, ಸಿಎಡಿ 1000ಮತ್ತು ಎಯುಡಿ 1000. ಒಂದು ವರ್ಷದ ಅವಧಿಗೆ ಮುನ್ನ ಖಾತೆಯನ್ನು ಮುಚ್ಚಿದರೆ ಯಾವುದೇ ಬಡ್ಡಿ ನೀಡಲಾಗುವುದಿಲ್ಲ, ಖಾತೆ ತೆರೆದ 2 ತಿಂಗಳೊಳಗೆ ಮುಚ್ಚಿದಲ್ಲಿ ಕನಿಷ್ಠ ರೂ.300/- ಅಥವಾ ಠೇವಣಿ ಮೊತ್ತದ 0.25% ರಷ್ಟು ದಂಡ ವಿಧಿಸಲಾಗುವುದು.

  • ಠೇವಣಿಗಳ ಮೇಲೆ ಸಾಲ ಪಡೆಯಲು ಅನುಮತಿ ಇದೆ. ಎನ್.ಆರ್.ಇ ಸ್ಥಿರ ಕಾಲಾವಧಿ ಠೇವಣಿಯ ಮೇಲೆ ಸಾಲ ಪಡೆಯುವಾಗ ಅನ್ವಯಿಸುವ ನಿಯಮಗಳೇ ಇಲ್ಲಿಯೂ ಅನ್ವಯಿಸುತ್ತವೆ.

  • ಜಂಟೀ ಖಾತೆಗಳನ್ನು ನಿರ್ವಹಿಸಬಹುದು ಮತ್ತು ಎನ್.ಆರ್.ಇ. ಠೇವಣಿಗೆ ಅನ್ವಯಿಸುವಂತೆ ಹಣವನ್ನು ಮರಳಿ ತನ್ನ ದೇಶಕ್ಕೂ ತರಿಸಿಕೊಳ್ಳಬಹುದು.

  • ಖಾತೆದಾರ ಮರಳಿ ಬಂದ ಆನಂತರ ಆತನ/ಆಕೆಯ ಅಭಿಪ್ರಾಯದಂತೆ ಠೇವಣಿಯ ಅವಧಿ ಮುಗಿದ ಆನಂತರ ಠೇವಣಿಯನ್ನು (ಆತ / ಆಕೆಗೆ ಅರ್ಹತೆಯಿದ್ದರೆ) ಭಾರತೀಯ ನಿವಾಸಿ ವಿದೇಶಿ ಕರೆನ್ಸಿ (ಆರ್.ಎಫ್.ಸಿ) ಖಾತೆಯಾಗಿ ಪರಿವರ್ತಿಸಬಹುದು ಮತ್ತು ಹೊಸ ಠೇವಣಿಗೆ (ರೂಪಾಯಿ ಖಾತೆ ಅಥವಾ ಆರ್.ಎಫ್.ಸಿ) ಸಂಬಂಧಿತ ಖಾತೆಗಳ ದರದಂತೆ ಬಡ್ಡಿ ನೀಡಲಾಗುವುದು.

  • ಎಫ್.ಸಿ.ಎನ್.ಆರ್.(ಬಿ) ಠೇವಣಿಯ ಮೇಲಿನ ಸಾಲವನ್ನು ಭಾರತೀಯ ರೂಪಾಯಿ ಅಥವಾ ವಿದೇಶಿ ಕರೆನ್ಸಿಯಲ್ಲಿ ನೀಡಲಾಗುವುದು.

  • ಠೇವಣಿಯ ಅವಧಿ ಮುಗಿದ ನಂತರ ಮುಚ್ಚಲು ಸೂಚನೆ ಇಲ್ಲದಿದ್ದಲ್ಲಿ ಎಫ್.ಸಿ.ಎನ್.ಆರ್.(ಬಿ) ಠೇವಣಿಗಳು ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತವೆ. ಕಾರಣಾಂತರದಿಂದ ಅವಧಿ ಮುಗಿದ ದಿನಾಂಕದಂದು ನವೀಕರಣ ಆಗದಿದ್ದಲ್ಲಿ ಮುಂದಿನ 14 ದಿನಗಳ (ಎರಡೂ ದಿನಗಳನ್ನು ಒಳಗೊಂಡು) ನವೀಕರಣ ಮಾಡಬೇಕು. 14 ದಿನದ ಮಿತಿಯನ್ನು ಮೀರಿದ ಅವಧಿಗೆ ಬಡ್ಡಿ ನೀಡುವುದಿಲ್ಲ.

  • ಎಫ್.ಸಿ.ಎನ್.ಆರ್ (ಬಿ) ಖಾತೆಯನ್ನು ಅವಧಿಪೂರ್ವವಾಗಿ ಮುಚ್ಚಿದಲ್ಲಿ ವಿಧಿಸುವ ದಂಡ:

  • ಒಂದು ವರ್ಷ ಪೂರೈಸಿದ ನಂತರ, ಠೇವಣಿ ಬ್ಯಾಂಕಿನಲ್ಲಿ ಇರುವಷ್ಟು ಅವಧಿಗೆ ಠೇವಣಿ ಸ್ವೀಕರಿಸುವ ಸಮಯದಲ್ಲಿ ಇರುವ ಬಡ್ಡಿಗಿಂತ 1% ಕಡಿಮೆ ಬಡ್ಡಿ ಅಥವಾ ಪ್ರಸ್ತುತ ಬಡ್ಡಿದರ ಎರಡರಲ್ಲಿ ಯಾವುದು ಕಡಿಮೆ ಇದೆಯೋ ಆ ಬಡ್ಡಿಯನ್ನು ಅವಧಿಪೂರ್ವ ಹಿಂಪಡೆದ ಅವಧಿಗೆ ನೀಡಲಾಗುವುದು.

  • ನಾಮನಿರ್ದೇಶನದ ಸೌಲಭ್ಯ ಲಭ್ಯವಿದೆ.

  • ಇಲ್ಲಿ ಕ್ಲಿಕ್ ಮಾಡಿ ಎಫ್.ಸಿ.ಎನ್.ಆರ್ ಖಾತೆ ತೆರೆಯುವ ನಮೂನೆಗಾಗಿ.

  • ಇಲ್ಲಿ ಕ್ಲಿಕ್ ಮಾಡಿ ಎಫ್.ಸಿ.ಎನ್.ಆರ್. (ಬಿ) ಠೇವಣಿಯ ಮೇಲೆ ಬಡ್ಡಿ ದರಗಳಿಗಾಗಿ.

longbanner rect1 rect2 rect3 rect4

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು