Syndicate Bank
banner
 

ಸಾಮಾನ್ಯ ಅಭ್ಯಾಸಗಳು – ಸಮಯ ಸೂಚಿ

 

ಬ್ಯಾಂಕಿಂಗ್ ವ್ಯವಹಾರದ ಸಮಯ :
ಕೇಂದ್ರೀಕೃತ ಬ್ಯಾಂಕಿಂಗ್ ಪರಿಹಾರ (ಸಿಬಿಎಸ್) ಶಾಖೆಗಳಲ್ಲಿ ವ್ಯವಹಾರವನ್ನು ವಾರದ ದಿನಗಳಲ್ಲಿ 5½ ಗಂಟೆಗಳ ಕಾಲ ಹಾಗೂ ಶನಿವಾರದಂದು 4 ಗಂಟೆಗಳ ಕಾಲ ವ್ಯವಹಾರ ಮಾಡಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಸಾಮಾನ್ಯವಾಗಿ 4 ಗಂಟೆಗಳ ಕಾಲ ಹಾಗೂ ಶನಿವಾರ 2 ಗಂಟೆಗಳ ಕಾಲ ಶಾಖೆಗಳು ಸಾರ್ವಜನಿಕ ವ್ಯವಹಾರ ನಡೆಸುವವು. ಆದರೆ, ವ್ಯವಹಾರದ ಸಮಯದ ಮುಂಚೆಯೇ ಬ್ಯಾಂಕಿಂಗ್ ಕೋಣೆ ಪ್ರವೇಶಿಸಿದ ಗ್ರಾಹಕರು ಸಹ ವ್ಯವಹಾರ ನಡೆಸಬಹುದು. ಸಂಪೂರ್ಣವಾಗಿ ಗಣಕೀಕೃತ ಶಾಖೆಗಳಲ್ಲಿ ವಾರದ ದಿನಗಳಲ್ಲಿ ವ್ಯವಹಾರದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ. ಆಯ್ದ ಶಾಖೆಗಳಲ್ಲಿ, ಸಾರ್ವಜನಿಕರ ಅನುಕೂಲವನ್ನು ಹೆಚ್ಚಿಸಲು 7 ದಿನದ ಬ್ಯಾಂಕಿಂಗ್ / ಭಾನುವಾರದ ಬ್ಯಾಂಕಿಂಗನ್ನು ಆಚರಣೆಗೆ ತರಲಾಗಿದೆ

 

ವ್ಯವಹಾರದ ಸಮಯದ ಪ್ರದರ್ಶನ:
ಸಾರ್ವಜನಿಕ ಅನುಕೂಲಕ್ಕಾಗಿ ಎಲ್ಲಾ ಶಾಖೆಗಳು / ವಿಸ್ತರಣಾ ಕೌಂಟರುಗಳು ಕಟ್ಟಡದ ಒಳ ಮತ್ತು ಹೊರಭಾಗದಲ್ಲಿ ವ್ಯವಹಾರದ ವಿವರಗಳು ಮತ್ತು ಕೆಲಸದ ಸಮಯವನ್ನು ಪ್ರದರ್ಶಿಸುತ್ತವೆ.

 

ನಗದು-ರಹಿತ ವ್ಯವಹಾರಗಳಿಗೆ, ವ್ಯವಹಾರದ ಸಮಯದ ವಿಸ್ತರಣೆ :
ಪಾಸ್ ಬುಕ್ / ಖಾತೆಯ ವರದಿ / ಚೆಕ್ ಬುಕ್ / ಪ್ರಯಾಣಿಕರ ಚೆಕ್ಕುಗಳು, ಕಾಲಾವಧಿ ಠೇವಣಿ ರಶೀದಿಯನ್ನು ವಿತರಣೆ ಮಾಡುವುದು ಹಾಗೂ ವೈಯಕ್ತಿಕ ಚೆಕ್ಕುಗಳನ್ನು ಜಮೆಗೆ ವರ್ಗಾವಣೆ ಮಾಡಲು, ಈ ಮುಂತಾದ ನಗದು-ರಹಿತ ವಹಿವಾಟುಗಳನ್ನು ಕೆಲಸದ ಸಮಯ ಮುಗಿಯುವ ಒಂದು ಗಂಟೆ ಮುಂಚಿನ ವರೆಗೆ ಎಲ್ಲಾ ಶಾಖೆಗಳಲ್ಲಿ ಮಾಡುವ ಸೌಲಭ್ಯವನ್ನು ಬ್ಯಾಂಕು ಒದಗಿಸಿದೆ

 

ರಜಾದಿನಗಳು ಹಾಗೂ ವಿತರಣಾ ವಾಹಿನಿಗಳು:
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಸರ್ಕಾರವು ಘೋಷಿಸಿದಂತೆ ರಜಾದಿನಗಳನ್ನು ಬ್ಯಾಂಕು ಆಚರಿಸುತ್ತದೆ, ಆ ಸಮಯದಲ್ಲಿ ಯಾವುದೇ ವಹಿವಾಟುಗಳಿರುವುದಿಲ್ಲ. ಇಂತಹ ರಜಾದಿನಗಳ ಪಟ್ಟಿಯನ್ನು ಶಾಖೆಗಳ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುತ್ತದೆ ಈ ರೀತಿಯ ರಜಾದಿನದ ಹಿಂದಿನ ಕೆಲಸದ ದಿನದಂದು ಮರುದಿನದ ರಜೆಯನ್ನು ನೆನಪಿಸಲು ಸ್ಥಳೀಯ ಭಾಷೆಯಲ್ಲಿ "ನಾಳೆ ರಜಾ ದಿನ " ಎಂದು ಪ್ರದರ್ಶಿಸುವ ಒಂದು ಫಲಕವನ್ನು ಎದ್ದುಕಾಣುವ ಜಾಗದಲ್ಲಿ ಹಾಕಲಾಗುತ್ತದೆ. ಆದರೆ ಎಟಿಎಂ, ಟೆಲಿಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ವಹಿವಾಟುಗಳನ್ನು ಭಾನುವಾರಗಳು ಅಥವಾ ಇತರ ರಜಾದಿನಗಳನ್ನು ಒಳಗೊಂಡಂತೆ ಎಲ್ಲಾ ದಿನಗಳಲ್ಲೂ 24 ಗಂಟೆಗಳು ಸಿಬಿಎಸ್ ನೆಟ್‍ವರ್ಕ್ ಮೂಲಕ ಸೇವೆಯ ಲಭ್ಯತೆಯನ್ನು ಬ್ಯಾಂಕು ಖಾತರಿಪಡಿಸುತ್ತದೆ

 

ಕೌಂಟರ್ ಸೇವೆ :
ಸಾಮಾನ್ಯ ಸಂದರ್ಭಗಳಲ್ಲಿ ವಿವಿಧ ಸೇವೆಗಳನ್ನು ಒದಗಿಸಲು ಬೇಕಾಗುವ ಗರಿಷ್ಠ ಸಮಯದ ಸೂಚನೆಯನ್ನು ಎಲ್ಲಾ ಶಾಖೆಗಳಲ್ಲಿ "ಕಾಲಸೂಚಿಗಳು" ತೋರಿಸುತ್ತವೆ. ಈ ಸೇವೆಗಳನ್ನು ಒದಗಿಸುವಲ್ಲಿ ವಿಳಂಬವಾದರೆ, ಗ್ರಾಹಕರು ಶಾಖೆಯ ಮುಖ್ಯಸ್ಥರ ಗಮನಕ್ಕೆ ಅಥವಾ ಪರಿಹಾರಕ್ಕಾಗಿ ಮೇಲ್ಮನವಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.

 

ಟೆಲ್ಲರ್ ಸೌಲಭ್ಯ :
ನಗದು ಹಿಂತೆಗೆದುಕೊಳ್ಳುವಿಕೆ ಮತ್ತು ನಗದು ಠೇವಣಿ ಮಾಡುವಾಗ ತೆಗೆದುಕೊಳ್ಳುವ ಸಮಯವನ್ನು ತಗ್ಗಿಸಲು, ನಿಗದಿತ ಹಣಕಾಸಿನ ಮಿತಿಯ ವರೆಗೆ ವ್ಯವಹರಿಸಲು ಟೆಲ್ಲರ್ ಸೌಲಭ್ಯವನ್ನು ಸಂಪೂರ್ಣ ಗಣಕೀಕೃತ ಹಾಗೂ ಸಿಬಿಎಸ್ ಶಾಖೆಗಳಲ್ಲಿ ಪ್ರಾರಂಭಿಸಲಾಗಿದೆ, ಈ ಏಕೈಕ ವಿಂಡೊದಲ್ಲಿ, ನಿಗದಿತ ಮಿತಿಯವರೆಗಿನ ಮೊತ್ತವನ್ನು ಹಿಂತೆಗೆದುಕೊಳ್ಳುವ ಚೀಟಿ / ಚೆಕ್ಕನ್ನು ಟೆಲ್ಲರ್ ಗೆ ನೇರವಾಗಿ ಸಲ್ಲಿಸಬಹುದು. ಇದರಿಂದಾಗಿ ನಗದು ಪಡೆಯಲು ಕಾಯುವ ಸಮಯವನ್ನು ಕಡಿಮೆ ಮಾಡಬಹುದು. ಸಿಬಿಎಸ್ ಶಾಖೆಗಳಲ್ಲಿ ಈ ಸೇವೆಗಳು ಕಚೇರಿಯ ಮುಂಭಾಗದ ಸಿಬ್ಬಂದಿಗಳಿಂದ ಲಭ್ಯವಾಗುತ್ತವೆ

longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು