Syndicate Bank
banner
 

ಸಿಂಡಿಕೇಟ್ ನಗದು ನಿರ್ವಹಣೆ ಸೇವೆಗಳು (ಎಸ್‍ಸಿಎಂಎಸ್)

 

ಸಿಂಡಿಕೇಟ್ ನಗದು ನಿರ್ವಹಣೆ ಸೇವೆಗಳು ಕಂಪನಿಗಳ ವ್ಯವಹಾರಗಳ ದಕ್ಷ ನಿರ್ವಹಣೆಯನ್ನು ಖಚಿತಪಡಿಸಲು ಅವಶ್ಯವಿರುವ ನಗದು ಹರಿವು ಮತ್ತು ನಿರ್ವಹಣೆಗೆ ಸಹಾಯವಾಗಬಲ್ಲ ಒಂದು ಪೂರ್ಣ ಶ್ರೇಣಿಯ ಸ್ವೀಕರಿಸುವ ಮತ್ತು ಪಾವತಿಸುವ ಸೇವೆಗಳನ್ನು ಒದಗಿಸುತ್ತಿವೆ .
ಗ್ರಾಹಕರಿಗೆ ಒದಗಿಸಲಾಗುವ ನಗದು ನಿರ್ವಹಣೆ ಸೇವೆಗಳು, ವ್ಯವಹಾರದ ಸ್ವರೂಪವನ್ನು ಆಧರಿಸಿ ಒಂದೇ ಕ್ರೆಡಿಟ್ ಅಥವಾ ಒಂದೇ ಡೆಬಿಟ್ ನ ದೊಡ್ಡ ಮೊತ್ತದ ವ್ಯವಹಾರವನ್ನು ನಡೆಸಲೂ ಅನುವು ಮಾಡುತ್ತದೆ.

  • ಗ್ರಾಹಕರ ನಿರ್ದಿಷ್ಟ ಅವಶ್ಯಕತೆಗೆ ತಕ್ಕಂತೆ ಉತ್ಪನ್ನವನ್ನು ವಿನ್ಯಾಸಗೊಳಿಸಬಹುದಾಗಿದೆ.
  • ಸಿಬಿಎಸ್ ಪ್ಲಾಟ್ ಫಾರ್ಮ್ ನ್ನು ಅತ್ಯುತ್ತಮವಾಗಿ ಬಳಸಿ ಗ್ರಾಹಕ ಕೇಂದ್ರಿತ ಮಾಹಿತಿ ಮತ್ತು ಹಣಕಾಸಿನ ಶೀಘ್ರ ವಿಲೇವಾರಿಯನ್ನು ಒದಗಿಸಲು ಸಿಎಂಎಸ್ ವ್ಯವಹಾರದ ಒಂದು ಉಪಕ್ರಮವಾಗಿದೆ.

ಒದಗಿಸಲಾಗುವ ಸಿಎಂಎಸ್ ಉತ್ಪನ್ನಗಳು

ಕೇಂದ್ರೀಕೃತ ಚೆಕ್ ಮತ್ತು ನಗದು ಸಂಗ್ರಹಣೆ
ಸಿಂಡಿಕೇಟ್ ಬ್ಯಾಂಕಿನ ನಮ್ಮ ಇತರ ಶಾಖೆಗಳಲ್ಲಿ ಪಡೆದ ಚೆಕ್ಕುಗಳನ್ನು ನಮ್ಮ ಕೇಂದ್ರೀಯ ಶಾಖೆಯಲ್ಲಿ ಪ್ರಕ್ರಿಯೆಗೊಳಿಸಲಾಗುವುದು ಕಾರ್ಪೊರೇಟ್ ಕ್ಲೈಂಟ್ ಗಳ ಗ್ರಾಹಕರ ಚಿಕ್ಕ ಠೇವಣಿಗಳನ್ನು ನಮ್ಮ ಶಾಖೆಗಳಲ್ಲಿ ಸ್ವೀಕರಿಸಲಾಗುವುದು (ಭಾರತದಾದ್ಯಂತ).
ಸಂಗ್ರಹವಾದ ಠೇವಣಿಗಳನ್ನು ಒಂದು ಸಾಮಾನ್ಯ ಖಾತೆಯಲ್ಲಿ ಒಟ್ಟುಗೂಡಿಸಲಾಗುವುದು ಮತ್ತು ಅವಶ್ಯಕತೆಗೆ ತಕ್ಕಂತೆ ಗ್ರಾಹಕೀಯಗೊಳಿಸಿದ ಕಾರ್ಪೊರೇಟ್ ಗಳಿಗೆ ಒದಗಿಸಲಾಗುವುದು.

ಸ್ವಯಂಚಾಲಿತ ಡೆಬಿಟ್ ಆದೇಶ
ನಮ್ಮ ಜೊತೆ ಬ್ಯಾಂಕಿಂಗ್ ನಡೆಸುತ್ತಿರುವ ಗ್ರಾಹಕರ ಆದೇಶದಂತೆ ಚಿಕ್ಕ ಮೊತ್ತದ ಆದರೆ ದೊಡ್ಡ ಸಂಖ್ಯೆಯಲ್ಲಿನ ಮರುಕಳಿಸುವ ಸಂಗ್ರಹಣೆಯನ್ನು ಮಾಡುವ ಮೂಲಕ ಸಂಗ್ರಹಣೆ / ಖಾತೆಯ ಡೆಬಿಟ್ ನ್ನು ಪ್ರಚೋದಿಸಲು ಈ ಸೌಲಭ್ಯ ಉಪಯುಕ್ತವಾಗುತ್ತದೆ.

ನೇರ ಕ್ರೆಡಿಟ್ ಮಾಡುವ ಮೂಲಕ ಹಣಕಾಸು ವರ್ಗಾವಣೆ
ಸಿಂಡಿಕೇಟ್ ಬ್ಯಾಂಕ್ ಖಾತೆದಾರರ ಸರಬರಾಜುದಾರರ ಪಾವತಿಗಳು, ಸಾಗರೋತ್ತರ ಹಣಕಾಸು ರವಾನೆಗಳು, ಸಂಬಳ ಪಾವತಿ, ಕಾನೂನಿಗನುಗುಣವಾದ ಪಾವತಿಗಳ ನಿರ್ವಹಣೆಯನ್ನು ಇದು ಒದಗಿಸುತ್ತದೆ.

ಡಿಡಿ ತೆಗೆಯುವುದು
ಕಾರ್ಪೊರೇಟ್, ಬ್ಯಾಂಕುಗಳು ಮತ್ತು ಅವರ ಗ್ರಾಹಕರಿಗೆ ಠೇವಣಿಯ ಮುನ್ನ ಅಥವಾ ಠೇವಣಿಯ ನಂತರದಲ್ಲಿ ಚೆಕ್ / ಡಿಡಿ ತೆಗೆಯುವ ಸೌಲಭ್ಯವನ್ನು ಇದು ಒದಗಿಸುತ್ತದೆ. ಸಿಎಂಎಸ್ ಗ್ರಾಹಕರಿಂದ ನೀಡಲ್ಪಟ್ಟ ಡಿಮ್ಯಾಂಡ್ ಡ್ರಾಫ್ಟ್ / ಸ್ಥಳೀಯವಾಗಿ ಪಾವತಿಸಲ್ಪಡುವ ಚೆಕ್ಕುಗಳನ್ನು / ಪಾವತಿಗೆ ಒದಗಿಸಿದಲ್ಲಿ ನಮ್ಮ ಸಿಬಿಎಸ್ ಶಾಖೆಗಳಲ್ಲಿ ಪಾವತಿಸಲಾಗುವುದು.

ಎನ್‍ಇಎಫ್‍ಟಿ ಪಾವತಿ
ದೇಶದ ವಿವಿಧ ಶಾಖೆಗಳಲ್ಲಿ ಖಾತೆಗಳನ್ನು ಹೊಂದಿದ ಫಲಾನುಭವಿಗಳ ಚಿಕ್ಕ, ದೊಡ್ಡ ಮೊತ್ತಗಳ ಹೆಚ್ಚು ಸಂಖ್ಯೆಯ ಹಣಕಾಸು ವಿತರಣೆಯನ್ನು ವಿದ್ಯುನ್ಮಾನ ವಾಹಿನಿಗಳ ಮೂಲಕ ಜಮೆ ಮಾಡಲಾಗುವುದು

ರಿಮೋಟ್ ಡಿಮ್ಯಾಂಡ್ ಡ್ರಾಫ್ಟ್ / ಪೇ ಆರ್ಡರ್ ನೀಡಿಕೆ
ಕಾರ್ಪೊರೇಟ್ / ಕರೆಸ್ಪಾಂಡೆಂಟ್ ಬ್ಯಾಂಕುಗಳಿಗೆ ನಮ್ಮ ಶಾಖೆಗಳ ಮೂಲಕ, ಸೂಚನೆಗಳೊಂದಿಗೆ ನಿರ್ದಿಷ್ಟ ಘಟಕಕ್ಕೆ ರಿಮೋಟ್ ಶಾಖೆಯಲ್ಲಿ ಪೇ ಆರ್ಡರ್ ನೀಡುವ ಸೌಲಭ್ಯವನ್ನು ಒದಗಿಸಲಾಗಿದೆ.

ನಗದು ನಿರ್ವಹಣೆ ಸೇವೆಗಳ ಪ್ರಮುಖ ಲಾಭಗಳು:

  • ಭಾರತದಾದ್ಯಂತ 3000ಕ್ಕೂ ಅಧಿಕ ಶಾಖೆಗಳ ವಿಶಾಲವಾದ ಜಾಲ.
  • ಪ್ರತಿದಿನದ ವರದಿ, ವ್ಯವಹಾರದ ವರದಿಯಂತಹ ಸಮಗ್ರ ಎಂಐಎಸ್ ವರದಿಯನ್ನು ನಾವು ಒದಗಿಸುತ್ತೇವೆ.
  • ಬಲವಾದ ವ್ಯವಸ್ಥಾಪಕ ಬೆಂಬಲ.
  • ಅತ್ಯಂತ ಸಮರ್ಥ ತಂಡ.
  • ನಿಗದಿತ ಸಮಯಕ್ಕೆ ಸರಿಯಾಗಿ ಸಂಗ್ರಹಣೆಯ ಠೇವಣಿ ಮಾಡುವ ಖಚಿತತೆ.
  • ನಿಗದಿತ ಸಮಯಕ್ಕೆ ಸರಿಯಾಗಿ ಕೋರಿರುವ ವಿತರಣೆಯ ನೆರವೇರಿಕೆ.
longbanner rect1 rect2 rect3 rect4

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು