Syndicate Bank
banner
 

ಸಿಂಡಿಕೇಟ್ ಬಂಡವಾಳ ಮಾರುಕಟ್ಟೆ ಸೇವೆಗಳು

 

ಎಎಸ್‍ಬಿಎ – ತಡೆಹಿಡಿಯಲ್ಪಡುವ ಹಣಕಾಸು ಬೆಂಬಲಿತ ನಮೂನೆ

ಸಾರ್ವಜನಿಕ ಪ್ರಚಾಲನೆ ಅಥವಾ ಹಕ್ಕುಗಳ ಪ್ರಚಾಲನೆಯಲ್ಲಿ ಹೂಡಿಕೆ ಮಾಡಲು, ಎಸ್ಇಬಿಐ ಮಾರ್ಗದರ್ಶನದಂತೆ ಸಿಂಡಿಕೇಟ್ ಬ್ಯಾಂಕ್ ಒಂದು ಸಮಸ್ಯೆ ರಹಿತ ಪರಿಹಾರವೊಂದನ್ನು ಪರಿಚಯಿಸಿದೆ. ಅದುವೇ ತಡೆಹಿಡಿಯಲ್ಪಟ್ಟ ಹಣಕಾಸು ಬೆಂಬಲಿತ ಅರ್ಜಿ (ಸಿಂಡ್ ಎಎಸ್‍ಬಿಎ). ಅರ್ಜಿ ಹಣವನ್ನು, ಬಿಡ್ ಹಂಚಿಕೆಯಾಗುವವರೆಗೆ ಚೆಕ್ ಮೂಲಕ ಪಾವತಿಸುವ ಪ್ರಸ್ತುತ ಚಾಲನೆಯಲ್ಲಿರುವ ವಿಧಾನಕ್ಕೆ ಹೊರತಾಗಿ, ಅರ್ಜಿ ಪ್ರಕ್ರಿಯೆಯಿಂದ ಬಿಡ್ ಹಂಚಿಕೆಯಾಗುವವರೆಗೂ ಖಾತೆಯಲ್ಲಿನ ಅರ್ಜಿಯ ಮೊತ್ತದ ಹಣ ತಡೆಹಿಡಿಯಲ್ಪಟ್ಟಿದ್ದರೂ, ಅದು ಎಎಸ್‍ಬಿಎ ಅಡಿಯಲ್ಲಿ ಬಡ್ಡಿ ಗಳಿಸುವುದನ್ನು ಮುಂದುವರೆಸುತ್ತದೆ. ಬಿಡ್ ಯಶಸ್ವಿಯಾಗಿ ಹಂಚಿಕೆಯಾದ ನಂತರವಷ್ಟೇ ಆ ಮೊತ್ತವನ್ನು ಖಾತೆಯಿಂದ ಡೆಬಿಟ್ ಮಾಡಲಾಗುವುದು. ಈ ಸೌಲಭ್ಯ ಹಕ್ಕುಗಳ ಪ್ರಚಾಲನೆ ಮತ್ತು ನ್ಯೂ ಫಂಡ್ ಆಫರ್ (ಎನ್ಎಫ್ಒ ) ಮ್ಯೂಚುಯಲ್ ಫಂಡ್ ಗಳಿಗೂ ಅನ್ವಯವಾಗುತ್ತದೆ.

ಹೂಡಿಕೆದಾರರು ಎಎಸ್‍ಬಿಎ ಮೂಲಕ ಅರ್ಜಿ ಸಲ್ಲಿಸಬಹುದು, ಆದರೆ, ಅವರು;

  • Img_Bullet ಸೆಬಿ ಮಾರ್ಗದರ್ಶಿಯ ಅನ್ವಯ ಐಪಿಒ / ಎಫ್ ಪಿ ಒ ಗೆ ಅರ್ಜಿ ಸಲ್ಲಿಸಲು ಅರ್ಹತಾ ಪಟ್ಟಿಗೆ ಸೇರಿದವರಾಗಿರಬೇಕು.
  • Img_Bullet ಸಿಂಡಿಕೇಟ್ ಬ್ಯಾಂಕಿನಲ್ಲಿ ಸಿಎಎಸ್ಎ ಖಾತೆಯನ್ನು ಹೊಂದಿದವರಾಗಿರಬೇಕು (ಎಸ್ ಬಿ / ಸಿ ಎ ಖಾತೆ)
  • Img_Bullet ಯಾವುದೇ ಡಿಪಿಯೊಂದಿಗೆ ಡಿಮ್ಯಾಟ್ ಖಾತೆ ಮತ್ತು ಪರ್ಮನೆಂಟ್ ಅಕೌಂಟ್ ನಂಬರ್ (ಪಿಎಎನ್) ಹೊಂದಿರಬೇಕು.
  • Img_Bullet ಅರ್ಜಿ ಸಲ್ಲಿಸಲು ಅವಶ್ಯವಾದ ಮೊತ್ತವನ್ನು ಖಾತೆಯಲ್ಲಿ ಹೊಂದಿರಬೇಕು.
  • Img_Bullet ಒಂದು ಅರ್ಜಿಯು ಮೂರು ಬಿಡ್ ವರೆಗೆ ಆಯ್ಕೆಗಳನ್ನು ಹೊಂದಿರುತ್ತದೆ.
  • Img_Bullet ಒಬ್ಬ ಹೂಡಿಕೆದಾರ ಬಿಡ್ಡಿಂಗ್ ಅವಧಿಯಲ್ಲಿ ತನ್ನ ಬಿಡ್ ನ್ನು ತಿದ್ದುಪಡಿ / ಪರಿಷ್ಕರಣೆ ಮಾಡಬಹುದು ಅಥವಾ ಅಳಿಸಿಹಾಕಬಹುದು.
  • Img_Bullet ಒಂದೇ ಬ್ಯಾಂಕ್ ಖಾತೆಯನ್ನು 5 ಬೇರೆ ಬೇರೆ ಅರ್ಜಿದಾರರು ಆದೇಶದ ಆಧಾರದ ಮೇಲೆ ಬಿಡ್ ಮಾಡಲು ಬಳಸಬಹುದು.

ಎ ಎಸ್ ಬಿ ಎ ಸೌಲಭ್ಯವು ಎಲ್ಲ ಶಾಖೆಗಳಲ್ಲಿ ಲಭ್ಯವಿದೆ.

ಎ ಎಸ್ ಬಿ ಎ ಐಪಿಒ ಅರ್ಜಿ ನಮೂನೆಗಳು ಸಾಮಾನ್ಯ ಐಪಿಒ ಅರ್ಜಿ ನಮೂನೆ ಗಳಿಗಿಂತ ಭಿನ್ನವಾಗಿವೆ ಮತ್ತು ಅಧಿಕೃತ ಶಾಖೆಗಳಲ್ಲಿ ಲಭ್ಯವಿವೆ ಅಥವಾ ಈ ಕೆಳಗಿನ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಬಹುದು.

ಸಿಂಡ್ ಇ-ಟ್ರೇಡ್ – (ಥ್ರೀ-ಇನ್-ಒನ್ ಆನ್ ಲೈನ್ ಷೇರ್ ಟ್ರೇಡಿಂಗ್ ಖಾತೆ)

ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರು ಅಥವಾ ಭದ್ರತಾ ಠೇವಣಿಗಳಲ್ಲಿ ವ್ಯವಹರಿಸುವವರಿಗಾಗಿ ಸಿಂಡ್ ಇ-ಟ್ರೇಡ್ – ಆನ್ ಲೈನ್ ಷೇರ್ ಟ್ರೇಡಿಂಗ್ ಖಾತೆ ಸೌಲಭ್ಯ (ಥ್ರೀ-ಇನ್-ಒನ್) ವನ್ನು ಒದಗಿಸಲು ಸಿಂಡಿಕೇಟ್ ಬ್ಯಾಂಕ್ ಪ್ರಮುಖ ಸ್ಟಾಕ್ ಬ್ರೋಕಿಂಗ್ ಕಂಪನಿಗಳಲ್ಲಿ ಒಂದಾದ ಅಸಿತ್ ಸಿ ಮೆಹ್ತಾ ಇನ್ವೆಸ್ಟ್‌ಮೆಂಟ್ ಇಂಟರ್‍‌ಮೀಡಿಯೇಟ್ಸ್ ಲಿಮಿಟೆಡ್ (ಎಸಿಎಂಐಐಎಲ್) ಕಂಪನಿಯೊಂದಿಗೆ ಕಾರ್ಯತಾಂತ್ರಿಕ ಒಪ್ಪಂದ ಮಾಡಿಕೊಂಡಿದೆ.

ನಿವಾಸಿ ಭಾರತೀಯ ವ್ಯಕ್ತಿಗಳು ಎನ್ ಎಸ್ ಇ / ಬಿ ಎಸ್ ಇ ಮೂಲಕ ಆನ್ ಲೈನ್ ನಲ್ಲಿ ಬ್ಯಾಂಕ್ ವೆಬ್ ಸೈಟ್ www.syndicatebank.in ನ ಮುಖಪುಟ – ಸೇವೆಗಳು – ಇತರ ಸೇವೆಗಳು – ಡಿಮ್ಯಾಟ್ ಸೇವೆ (ಸಿಂಡ್ ಡಿಮ್ಯಾಟ್) - ಆನ್ ಲೈನ್ ಟ್ರೇಡಿಂಗ್ – ಸಿಂಡ್ ಇ- ಟ್ರೇಡ್ ನಲ್ಲಿ ಸಿಂಡ್-ಇ-ಟ್ರೇಡ್ ಕೊಂಡಿಯನ್ನು ಬಳಸಿ ಈಕ್ವಿಟಿ ಷೇರುಗಳನ್ನು ಮಾರಬಹುದು / ಖರೀದಿಸಬಹುದು.

ಬ್ಯಾಂಕ್ ಗ್ರಾಹಕರು ಸಿಂಡ್-ಇ-ಟ್ರೇಡ್ ಸೌಲಭ್ಯವನ್ನು ಪಡೆಯಲು ಈ ಕೆಳಗಿನ ಮೂರು ಖಾತೆಗಳನ್ನು ಹೊಂದಿರಬೇಕು:

  1. Img_Bullet ಸಿಂಡಿಕೇಟ್ ಬ್ಯಾಂಕಿನ ಯಾವುದೇ ಸಿಬಿಎಸ್ ಶಾಖೆಯಲ್ಲಿ ಚಾಲ್ತಿ / ಉಳಿತಾಯ ಖಾತೆ
  2. Img_Bulletಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಉಪಲಬ್ಧವಿರುವ ಠೇವಣಿ ಸೇವೆಗಳು
  3. Img_Bullet ಬ್ರೋಕರ್ ಪಾರ್ಟನರ್ ಅಸಿತ್ ಸಿ ಮೆಹ್ತಾ ಇನ್ವೆಸ್ಟ್‍ಮೆಂಟ್ ಇಂಟರ್‍‌ಮೀಡಿಯೇಟ್ಸ್ ಲಿಮಿಟೆಡ್ (ಎಸಿಎಂಐಐಎಲ್) ಅವರಲ್ಲಿ ಆನ್‍ಲೈನ್ ಟ್ರೇಡಿಂಗ್ ಖಾತೆ

ಇದರ ವ್ಯವಸ್ಥೆ ಮಾಡಲು, ಥ್ರೀ-ಇನ್-ಒನ್ ಸೌಲಭ್ಯವನ್ನು ಒದಗಿಸಲು ಸಿಂಡಿಕೇಟ್ ಬ್ಯಾಂಕಿನ ಚಾಲ್ತಿ ಅಥವಾ ಉಳಿತಾಯ ಖಾತೆ ಮತ್ತು ಡಿಮ್ಯಾಟ್ ಖಾತೆಯನ್ನು ಎಸಿಎಂಐಐಎಲ್ ನಲ್ಲಿನ ಟ್ರೇಡಿಂಗ್ ಖಾತೆಯಲ್ಲಿ ಸಂಯೋಜಿಸಲಾಗುವುದು.

ಸಿಂಡ್ ಡಿಮ್ಯಾಟ್ (ಠೇವಣಿ ಭಾಗಾರ್ಥಿಯ ಸೇವೆಗಳು)

16.01.2008 ರಿಂದ ನಮ್ಮ ಬ್ಯಾಂಕ್ ಸಿಂಡ್ ಡಿಮ್ಯಾಟ್ (ಠೇವಣಿ ಭಾಗಾರ್ಥಿಯ ಸೇವೆಗಳು) ನ್ನು ಪ್ರಾರಂಭಿಸಿದೆ.

ಈ ಕೆಳಗಿನ ಠೇವಣಿ ಸೇವೆಗಳು ನಮ್ಮ ಬ್ಯಾಂಕಿನಲ್ಲಿ ಲಭ್ಯವಿವೆ.

  • Img_Bulletವೈಯಕ್ತಿಕ / ವೈಯಕ್ತಿಕವಲ್ಲದ ಡಿಮ್ಯಾಟ್ ಖಾತೆಯನ್ನು ತೆರೆಯುವುದು
  • Img_Bulletಭದ್ರತೆಗಳನ್ನು ವಿದ್ಯುನ್ಮಾನ ವಾಹಿನಿಯಲ್ಲಿ ಹೊಂದುವುದು
  • Img_Bulletಅಭೌತೀಕರಣಗೊಳಿಸುವುದು (Dematerialisation)
  • Img_Bulletಮರುಭೌತೀಕರಣಗೊಳಿಸುವುದು (Rematerialisation)
  • Img_Bullet ವ್ಯವಹಾರಗಳ ಪಾವತಿ ವಿತರಣೆ – ಮಾರುಕಟ್ಟೆಯಲ್ಲಿನ ; ಮಾರುಕಟ್ಟೆಯ ಹೊರಗಿರುವ ; ಠೇವಣಿಯ ಪ್ರಕ್ರಿಯೆಯಲ್ಲಿರುವ
  • Img_Bulletಭದ್ರತೆಗಳನ್ನು ಗಿರವಿ ಇಡಲು / ತೆಗೆಯಲು, ಡಿಮ್ಯಾಟ್ ಖಾತೆಯನ್ನು ತಟಸ್ಥಗೊಳಿಸಲು / ಬಿಡುಗಡೆ ಗೊಳಿಸಲು

ಬ್ಯಾಂಕಿನ ಎಲ್ಲ ಶಾಖೆಗಳಲ್ಲಿ ಠೇವಣಿ ಸೇವೆಗಳು ಲಭ್ಯವಿವೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಸೌಲಭ್ಯ)– ಎನ್ ಪಿ ಎಸ್

ದೇಶದ ಎಲ್ಲ ವರ್ಗದ ಹಿರಿಯ ನಾಗರಿಕರಿಗೆ ಆದಾಯ ಭದ್ರತೆ ಒದಗಿಸುವ ದೃಷ್ಟಿಯಿಂದ ಅಸಂಘಟಿತ ವಲಯದ ಕಾರ್ಮಿಕರೂ ಸೇರಿದಂತೆ, ಭಾರತದ ಎಲ್ಲ ಪ್ರಜೆಗಳಿಗೆ ಒಂದು ಸ್ವಯಂ ಪ್ರೇರಿತ ರಾಷ್ಟ್ರೀಯ ಪಿಂಚಣಿ (ಪೆನ್ಷನ್) ವ್ಯವಸ್ಥೆಯನ್ನು ಭಾರತ ಸರ್ಕಾರವು ಪರಿಚಯಿಸಿದೆ.

ಮೇ 1, 2009 ರ ಜಾರಿ ನಿರ್ದೇಶನದಂತೆ, ಈಗ ಎನ್ ಪಿ ಎಸ್, ಭಾರತದ ಎಲ್ಲ ನಾಗರಿಕರಿಗೂ ದೊರೆಯಲಿದೆ. ಸರಕಾರಿ ನೌಕರರು ಈಗಾಗಲೇ ಎನ್ ಪಿ ಎಸ್. ಸೌಲಭ್ಯದ ವ್ಯಾಪ್ತಿಯಲ್ಲಿದ್ದಾರೆ.

ಸಿಂಡಿಕೇಟ್ ಬ್ಯಾಂಕ್, ಪಿಂಚಣಿ ನಿಧಿ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಪಿ ಎಫ್ ಆರ್ ಡಿ ಎ) ದಿಂದ ಉಪಸ್ಥಿತಿ ಮತ್ತು ಸಂಗ್ರಾಹಕ ಕೇಂದ್ರವಾಗಿ (ಬಿಂದುವಾಗಿ) ನೋಂದಾಯಿಸಲ್ಪಟ್ಟಿದೆ::

 ಉಪಸ್ಥಿತಿ ಕೇಂದ್ರದ ಮಾದರಿ (ಪಿ ಒ ಪಿ)

  • Img_Bulletಶ್ರೇಣಿ – 1 ಖಾತೆ: “ಹಿಂತೆಗೆದುಕೊಳ್ಳಲಾಗದ ಖಾತೆ”ಯಲ್ಲಿ ನಿವೃತ್ತಿ ಉಳಿತಾಯ ಕೊಡುಗೆ
  • Img_Bulletಶ್ರೇಣಿ – 2 ಖಾತೆ: ಇದೊಂದು ಸ್ವಯಂ ಪ್ರೇರಿತ ಸೌಲಭ್ಯವಾಗಿದ್ದು, ಚಂದಾದಾರರು ತಾವು ಬಯಸಿದಾಗ ತಮ್ಮ ಖಾತೆಯಿಂದ ಉಳಿತಾಯದ ಮೊತ್ತವನ್ನು ಹಿಂತೆಗೆದುಕೊಳ್ಳಬಹುದಾಗಿದೆ.

ಶ್ರೇಣಿ – 1 ರ ಖಾತೆಯನ್ನು ಮೇ 1, 2009 ರಿಂದ ಲಭ್ಯಗೊಳಿಸಲಾಗಿದ್ದರೆ, ಶ್ರೇಣಿ – 2 ರ ಖಾತೆಯ ಸೌಲಭ್ಯವನ್ನು, ಡಿಸೆಂಬರ್ 1, 2009 ರಿಂದ, ಕಡ್ಡಾಯವಾಗಿ ಎನ್ ಪಿ ಎಸ್. ನ ಅಡಿಯಲ್ಲಿ ಬರುವ ಸರಕಾರಿ ನೌಕರರನ್ನೂ ಸೇರಿದಂತೆ, ಭಾರತದ ಎಲ್ಲ ಪ್ರಜೆಗಳಿಗೂ ಒದಗಿಸಲಾಗಿದೆ

ಅಟಲ್ ಪಿಂಚಣಿ ಯೋಜನೆ:

ಸರಕಾರವು 2015-16 ರ ಮುಂಗಡ ಪತ್ರದಲ್ಲಿ ಎಲ್ಲ ಭಾರತೀಯರಿಗೆ ವಿಮೆ ಮತ್ತು ಪಿಂಚಣಿ ಕ್ಷೇತ್ರಗಳಲ್ಲಿ ಸಾರ್ವತ್ರಿಕ ಸಾಮಾಜಿಕ ಭದ್ರತಾ ಯೋಜನೆಯನ್ನು ಘೋಷಿಸಿದೆ. ಆದ್ದರಿಂದ, ಸರಕಾರವು ಅಟಲ್ ಪಿಂಚಣಿ ಯೋಜನೆ (ಎ ಪಿ ವೈ) ಯನ್ನು ಪ್ರಾರಂಭಿಸಿದ್ದು, ಇದು ವಂತಿಗೆ ಹಾಗೂ ಕಾಲಾವಧಿಗನುಸಾರವಾಗಿ ನಿರ್ಧಿಷ್ಟ ಪಿಂಚಣಿಯನ್ನು ಒದಗಿಸುತ್ತದೆ.

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿ ಎಫ್ ಆರ್ ಡಿ ಎ) ಜಾರಿಗೊಳಿಸಿದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಯನ್ನು ಸೇರಿದ ಎಲ್ಲ ನಾಗರಿಕರ ಮೇಲೆ ಎ ಪಿ ವೈ ನ ಗಮನ ಕೇಂದ್ರೀಕರಿಸಲಾಗುವುದು. ಎಪಿವೈ ಯನ್ನು ಸೇರುವ ವಯಸ್ಸು ಮತ್ತು ಆ ಚಂದಾದಾರರು ವಂತಿಗೆಯ ಆಧಾರದ ಮೇಲೆ ಅವರ 60ನೆ ವಯಸ್ಸಿನಿಂದ ನಿರ್ದಿಷ್ಟ ರೂ.1000, ರೂ.2000, ರೂ.3000, ರೂ.4000, ರೂ.5000 ಪ್ರತಿ ತಿಂಗಳು ಪಿಂಚಣಿ ಸ್ವೀಕರಿಸಬಹುದು. ಎಪಿವೈ ಸೇರಲು ಕನಿಷ್ಠ ವಯೋಮಿತಿ 18 ವರ್ಷ ಹಾಗೂ ಗರಿಷ್ಠ 40 ವರ್ಷ.ಆದ್ದರಿಂದ, ಎಪಿವೈ ಅಡಿಯಲ್ಲಿ ಯಾವುದೇ ಚಂದಾದಾರರು ವಂತಿಗೆ ಕಟ್ಟುವ ಅವಧಿ ಕನಿಷ್ಠ 20 ವರ್ಷವಾಗಿರುತ್ತದೆ. ನಿರ್ದಿಷ್ಟ ಕನಿಷ್ಠ ಪಿಂಚಣಿಯ ಲಾಭವು ಸರಕಾರದಿಂದ ಖಾತರಿಗೊಂಡಿದೆ.

longbanner rect1 rect2 rect3 rect4

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು