Syndicate Bank
banner
 

ಬ್ಯಾಂಕುಗಳ ಕಂಪ್ಯೂಟರೀಕರಣ

 

ಕಂಪ್ಯೂಟರೀಕರಣದ ಬಗ್ಗೆ ಸಂಕ್ಷಿಪ್ತ ವಿವರ

  ದಿನನಿತ್ಯದ ಕಾರ್ಯಾಚರಣೆಗಳಿಗೆ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವ ಮೂಲಕ ತನ್ನ ಗ್ರಾಹಕರಿಗೆ ಒದಗಿಸುವ ಸೇವೆಯ ಗುಣಮಟ್ಟವನ್ನು ಸುಧಾರಿಸಲು ಬ್ಯಾಂಕ್ ಬದ್ಧವಾಗಿದೆ.
  ಪ್ರಸ್ತುತದಲ್ಲಿ, ಭಾರತದ 34 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯಾಂಕ್ 3858 ಶಾಖೆಗಳನ್ನು ಹೊಂದಿದೆ ಹಾಗೂ ಲಂಡನ್ನಿನಲ್ಲಿ ಒಂದು ಶಾಖೆಯನ್ನು ಹೊಂದಿದೆ..
  ಇವುಗಳಲ್ಲಿ 2230 ಗ್ರಾಮೀಣ ಮತ್ತು ಅರೆ ನಗರ ಕೇಂದ್ರಗಳಲ್ಲಿವೆ.
  ಭಾರತದಲ್ಲಿನ ಎಲ್ಲಾ ಶಾಖೆಗಳು / ಕಚೇರಿಗಳು ಪ್ರಸ್ತುತ ಕೇಂದ್ರೀಕೃತ ಸರ್ವರ್ ವ್ಯವಸ್ಥೆಯ ಅಡಿಯಲ್ಲಿವೆ.
  ಲಂಡನ್ ನಲ್ಲಿರುವ ನಮ್ಮ ಸಾಗರೋತ್ತರ ಶಾಖೆಯನ್ನು ಗ್ರಾಹಕ ಕೇಂದ್ರೀಕೃತ ಬ್ಯಾಂಕಿಂಗ್, ಉತ್ಪನ್ನ ಸಂರಚನೆ, ಮಲ್ಟಿ-ಚಾನೆಲ್ ಸಾಮರ್ಥ್ಯ, ಇತ್ಯಾದಿಗಳಿಗೆ ಬೆಂಬಲ ನೀಡುವ ಸಾಮರ್ಥ್ಯ ಹೊಂದಿರುವ ಇತ್ತೀಚಿನ ಸಾಫ್ಟ್‌ವೇರ್ ಅಪ್ಲಿಕೇಶನ್ ಹೊಂದಿರುವ ಸಾಗರೋತ್ತರ ಸಿಬಿಎಸ್ ಅಡಿಯಲ್ಲಿ ತರಲಾಗಿದೆ.
  ಬ್ಯಾಂಕಿನ 100% ರಷ್ಟು ವ್ಯವಹಾರವನ್ನು ಕಂಪ್ಯೂಟರ್ ಗಳಲ್ಲಿ ದಾಖಲು ಮಾಡಲಾಗುತ್ತಿದೆ.
  "ಸಿಂಡಿಕೇಟ್-ಇ-ಬ್ಯಾಂಕಿಂಗ್" ಎಂಬ ಹೆಸರಿನಿಂದ ಕರೆಯಲ್ಪಡುವ ಕೇಂದ್ರೀಕೃತ ಬ್ಯಾಂಕಿಂಗ್ ಪರಿಹಾರವನ್ನು (ಸಿಬಿಎಸ್) ಅನುಷ್ಠಾನಗೊಳಿಸುವ ಮೂಲಕ ಬ್ಯಾಂಕು ಐಟಿ ಕ್ಷೇತ್ರದಲ್ಲಿ ಪ್ರಮುಖ ಉಪಕ್ರಮವನ್ನು ಪ್ರಾರಂಭಿಸಿದೆ.


ಕೇಂದ್ರೀಕೃತ ಬ್ಯಾಂಕಿಂಗ್ ಪರಿಹಾರ (ಸಿಬಿಎಸ್) ಶಾಖೆಗಳು:

ಗ್ರಾಹಕರ ಹೆಚ್ಚುತ್ತಿರುವ ಅಗತ್ಯಗಳನ್ನು ಪರಿಗಣಿಸಿ, ಯಾವುದೇ ಸ್ಥಳದಿಂದ ಹಾಗೂ ಯಾವುದೇ ಸಮಯದಲ್ಲಿ ಬ್ಯಾಂಕಿಂಗ್ ವ್ಯವಹಾರ ನಡೆಸಲು ಅನುಕೂಲವಾಗುವಂತೆ, ಐಟಿ ಮತ್ತು ಸಂವಹನ ತಂತ್ರಜ್ಞಾನವನ್ನು ಸಂಯೋಜಿಸುವ ಹಾಗೂ ಆಯಾ ಶಾಖೆಗಳಲ್ಲಿನ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸುವ ಸಿಬಿಎಸ್ ನ್ನು ಬ್ಯಾಂಕು ಅಳವಡಿಸಿಕೊಂಡಿದೆ. ಎಟಿಎಂಗಳು, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ತಕ್ಷಣ ಹಣ ವರ್ಗಾವಣೆ, ಮಲ್ಟಿ-ಸಿಟಿ ಖಾತೆಗಳು, ಯಾವುದೇ ಶಾಖೆ ಬ್ಯಾಂಕಿಂಗ್ ಇತ್ಯಾದಿ ಸೇವೆಗಳನ್ನು ಒದಗಿಸುವ ಮೂಲಕ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಸಿಬಿಎಸ್ ನ್ನು ಎಲ್ಲಾ ಶಾಖೆಗಳಲ್ಲೂ ಬ್ಯಾಂಕ್ ಕಾರ್ಯಗತಗೊಳಿಸಿದೆ. ಸಿಂಡಿಕೇಟ್-ಇ-ಬ್ಯಾಂಕಿಂಗ್ ಎಂಬ ಬ್ರಾಂಡ್ ಹೆಸರಿನ, ಆಧುನಿಕ ತಂತ್ರಜ್ಞಾನದ, ಸಾರ್ವಜನಿಕರ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಅಗತ್ಯಗಳನ್ನು ಪೂರೈಸುವ, ಬಹು ವಿತರಣಾ ಚಾನೆಲ್ ಗಳ ಮೂಲಕ ಉಚ್ಚ ಮಟ್ಟದ ಉತ್ಪನ್ನಗಳನ್ನು ಒದಗಿಸುವ ಈ ವಿಧಾನ ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ಬಡ್ಡಿದರ ಹಾಗೂ ಡಿಮ್ಯಾಂಡ್ ಠೇವಣಿಗಳ ದ್ರವ್ಯತೆಯ ಅವಳಿ ಪ್ರಯೋಜನಗಳನ್ನು ಒದಗಿಸಲು ‘ಸ್ವೀಪ್-ಇನ್’ ಹಾಗೂ ‘ಸ್ವೀಪ್-ಔಟ್’ ಸೌಲಭ್ಯವಿರುವ ಸೂಪರ್ ಉಳಿತಾಯ ಖಾತೆಗಳನ್ನು ಶಾಖೆಗಳು ಒದಗಿಸುತ್ತವೆ. ಇಂತಹ ಶಾಖೆಗಳಲ್ಲಿ ಒದಗಿಸಲಾಗುವ ಉತ್ಪನ್ನಗಳು ಮತ್ತು ಸೇವೆಗಳ ಮಾಹಿತಿಯನ್ನು ಯಾವುದೇ ಸಿಬಿಎಸ್ ಶಾಖೆಯಿಂದ ಅಥವಾ ಬ್ಯಾಂಕಿನ ಜಾಲತಾಣದಿಂದ ಪಡೆಯಬಹುದು.

ಸಿಂಡಿಕೇಟ್-ಇ-ಬ್ಯಾಂಕಿಂಗ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು